ADVERTISEMENT

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯ ಪ್ರಗತಿ ಇಳಿಕೆ

ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಸೂಚ್ಯಂಕ ಇಳಿಕೆ: ಎಸ್‌ ಆ್ಯಂಡ್ ಪಿ ಸಮೀಕ್ಷೆ

ಪಿಟಿಐ
Published 6 ನವೆಂಬರ್ 2025, 14:19 IST
Last Updated 6 ನವೆಂಬರ್ 2025, 14:19 IST
<div class="paragraphs"><p>ಸೇವಾವಲಯ</p></div>

ಸೇವಾವಲಯ

   

ನವದೆಹಲಿ: ‘ದೇಶದ ಸೇವಾ ವಲಯದ ಬೆಳವಣಿಗೆ ಅಕ್ಟೋಬರ್ ತಿಂಗಳಿನಲ್ಲಿ ಐದು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಆಗಿದೆ’ ಎಂದು ಎಸ್ ಆ್ಯಂಡ್‌ ಪಿ ಗ್ಲೋಬಲ್‌ ಸಂಸ್ಥೆಯ ಮಾಸಿಕ ಸಮೀಕ್ಷೆ ಗುರುವಾರ ತಿಳಿಸಿದೆ.

ಎಚ್‌ಎಸ್‌ಬಿಸಿ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಸೆಪ್ಟೆಂಬರ್‌ನಲ್ಲಿ 60.9 ದಾಖಲಾಗಿತ್ತು. ಆದರೆ, ಅಕ್ಟೋಬರ್‌ನಲ್ಲಿ 58.9ಕ್ಕೆ ಇಳಿದಿದೆ.

ADVERTISEMENT

ಪಿಎಂಐ ಸೂಚ್ಯಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದರೆ ಅದನ್ನು ಬೆಳವಣಿಗೆ ಎಂದು ಗುರುತಿಸಲಾಗುತ್ತದೆ.

‘ಹೆಚ್ಚಿದ ಸ್ಪರ್ಧಾತ್ಮಕತೆಯ ಒತ್ತಡ ಮತ್ತು ಭಾರಿ ಮಳೆಯು ಚಟುವಟಿಕೆಯ ಇಳಿಕೆಗೆ ಕಾರಣವಾದವು. ಇದು ಸೂಚ್ಯಂಕ ಇಳಿಕೆಗೆ ದಾರಿ ಮಾಡಿಕೊಟ್ಟಿತು’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞೆ ಪ್ರಾಂಜುಲ್ ಭಂಡಾರಿ ಹೇಳಿದ್ದಾರೆ.

ಹೆಚ್ಚಿದ ಬೇಡಿಕೆ ಮತ್ತು ಜಿಎಸ್‌ಟಿ ದರ ಇಳಿಕೆಯಂತಹ ಅಂಶಗಳು ಕಾರ್ಯಾಚರಣೆಯ ಸ್ಥಿತಿ ಸುಧಾರಿಸಲು ನೆರವಾದವು. ಆದರೂ, ಸ್ಪರ್ಧಾತ್ಮಕತೆ ಮತ್ತು ಹೆಚ್ಚಿನ ಮಳೆಯಿಂದ ಬೆಳವಣಿಗೆಯು ನಿಧಾನವಾಯಿತು ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ದೇಶದ ಸೇವಾ ವಲಯಕ್ಕೆ ಬೇಡಿಕೆ ಸುಧಾರಿಸಿದೆ. ಜಿಎಸ್‌ಟಿ ದರ ಇಳಿಕೆಯು ಬೆಲೆ ಏರಿಕೆಯನ್ನು ನಿಯಂತ್ರಿಸಿದೆ. ಆದರೆ, ವೆಚ್ಚವು ಏರಿಕೆಯು ಹೆಚ್ಚಿನ ಮಟ್ಟದಲ್ಲಿ ಇಲ್ಲ. ಮುಂದಿನ 12 ತಿಂಗಳಿನಲ್ಲಿ ವಹಿವಾಟು ಹೆಚ್ಚಳವಾಗುವ ವಿಶ್ವಾಸವನ್ನು ಕಂಪನಿಗಳು ಹೊಂದಿವೆ.

ದೇಶದ ಸಂಯೋಜಿತ ಪಿಎಂಐ ಸೆಪ್ಟೆಂಬರ್‌ನಲ್ಲಿ 61 ಇತ್ತು. ಇದು ಅಕ್ಟೋಬರ್‌ನಲ್ಲಿ 60.4ಕ್ಕೆ ಇಳಿದಿದೆ. ಸೇವಾ ವಲಯದಲ್ಲಿನ ಮಂದಗತಿ ಬೆಳವಣಿಗೆ ಇದಕ್ಕೆ ಕಾರಣ ಎಂದು ಭಂಡಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.