ADVERTISEMENT

ಸ್ವಾವಲಂಬನೆಯ ಹಾದಿ, ಎಲೆಕ್ಟ್ರಾನಿಕ್ಸ್ ಆಮದು ತಗ್ಗಿಸಬೇಕಿದೆ: ಅಸೋಚಾಂ

ಪಿಟಿಐ
Published 6 ಜುಲೈ 2020, 6:55 IST
Last Updated 6 ಜುಲೈ 2020, 6:55 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸ್ವಾವಲಂಬನೆ ಸಾಧಿಸಲು ಭಾರತವು ಎರಡರಿಂದ ಮೂರು ವರ್ಷಗಳಲ್ಲಿ ಪ್ರಮುಖ 15 ಉತ್ಪನ್ನಗಳ ತಯಾರಿಕಾ ಸಾಮರ್ಥ್ಯ ಹೆಚ್ಚಿಸುವ ಕಡೆಗೆ ಗಮನ ಹರಿಸಬೇಕಾಗಿದೆ ಎಂದುಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಅಭಿಪ್ರಾಯಪಟ್ಟಿದೆ

ಎಲೆಕ್ಟ್ರಾನಿಕ್ಸ್‌, ಕಲ್ಲಿದ್ದಲು, ಉಕ್ಕು, ಖಾದ್ಯತೈಲ, ರಸಗೊಬ್ಬರವನ್ನೂ ಒಳಗೊಂಡು 15 ಉತ್ಪನ್ನಗಳಲ್ಲಿ ಸ್ವಾವಲಂಬನೆ ಸಾಧಿಸುವ ಅಗತ್ಯವಿದೆ ಎಂದು ಹೇಳಿದೆ.

ಕಚ್ಚಾತೈಲ ಮತ್ತು ಚಿನ್ನ ಹೊರತುಪಡಿಸಿದರೆ ಎಲೆಕ್ಟ್ರಾನಿಕ್ಸ್‌ ಉಪಕರಣಗಳ ಆಮದುಗರಿಷ್ಠ ಮಟ್ಟದಲ್ಲಿದೆ. ಭಾಗಶಃ ಲಾಕ್‌ಡೌನ್‌ ಇದ್ದರೂ ಮೇನಲ್ಲಿ ₹21 ಸಾವಿರ ಕೋಟಿ ಮೌಲ್ಯದ ಎಲೆಕ್ಟ್ರಾನಿಕ್‌ ಸರಕುಗಳು ಆಮದಾಗಿವೆ. ಸಹಜ ಸ್ಥಿತಿಯಲ್ಲಿ ಇದರ ಮೌಲ್ಯವು ₹37,500 ಕೋಟಿಗಳಷ್ಟಾಗಲಿದೆ.

ADVERTISEMENT

ಆಮದು ಮೇಲಿನ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬೇಕು.ಸ್ವಾವಲಂಬನೆ ಸಾಧಿಸಲು ದೇಶಿ ಮತ್ತು ವಿದೇಶಿ ನೇರ ಹೂಡಿಕೆಗೆ ಹೆಚ್ಚಿನ ಉತ್ತೇಜನ ನೀಡಬೇಕಿದೆ.

ಭಾರಿ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉಪಕರಣಗಳಿಗೆ ಉತ್ಪನ್ನ ಆಧಾರಿತ ಉತ್ತೇಜನ ಯೋಜನೆಯ ಅಗತ್ಯವಿದೆ. ಇದರಿಂದ ದೇಶಿ ತಯಾರಿಕೆ ಹೆಚ್ಚಾಗಲಿದ್ದು, ಹೂಡಿಕೆಯನ್ನೂ ಆಕರ್ಷಿಸಲಿದೆ. ಮೊಬೈಲ್‌ ತಯಾರಿಕೆ ಮತ್ತು ಕೆಲವು ಬಿಡಿಭಾಗಗಳ ತಯಾರಿಕೆ, ಬಿಡಿಭಾಗಗಳ ಜೋಡಣೆ, ಪರೀಕ್ಷೆ ಮತ್ತು ಪ್ಯಾಕೇಜ್‌ಗೆ ಉತ್ತೇಜನ ಸಿಗಲಿದೆ.ಕಚ್ಚಾತೈಲದ ಮೇಲಿನ ಅವಲಂಬನೆ ಕಡಿಮೆ ಮಾಡಲು ದೀರ್ಘಾವಧಿಯ ಯೋಜನೆ ರೂಪಿಸಬೇಕಿದೆ ಎಂದೂ ‘ಅಸೋಚಾಂ’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.