ADVERTISEMENT

ಮಾಲ್ದೀವ್ಸ್‌ಗೆ ಅಗತ್ಯ ವಸ್ತುಗಳ ಪೂರೈಕೆಗೆ ಅನುಮತಿ

ಪಿಟಿಐ
Published 5 ಏಪ್ರಿಲ್ 2024, 15:56 IST
Last Updated 5 ಏಪ್ರಿಲ್ 2024, 15:56 IST
<div class="paragraphs"><p>ಮಾಲ್ದೀವ್ಸ್‌</p></div>

ಮಾಲ್ದೀವ್ಸ್‌

   

ನವದೆಹಲಿ/ ಮಾಲೆ: ಮಾಲ್ದೀವ್ಸ್‌ಗೆ ಅಗತ್ಯ ವಸ್ತುಗಳನ್ನು ಪೂರೈಸಲು ಅನುಕೂಲವಾಗುವಂತೆ ಭಾರತವು ಶುಕ್ರವಾರ, ರಫ್ತು ನಿರ್ಬಂಧಗಳನ್ನು ತೆಗೆದುಹಾಕಿದೆ.

2024–25ನೇ ಸಾಲಿನ ದ್ವಿಪಕ್ಷೀಯ ಒಪ್ಪಂದದ ಅನ್ವಯ ಈ ತೀರ್ಮಾನ ಕೈಗೊಳ್ಳಲಾಗಿದೆ.

ADVERTISEMENT

ಮೊಟ್ಟೆ, ಆಲೂಗೆಡ್ಡೆ, ಈರುಳ್ಳಿ, ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಬೇಳೆ ಹಾಗೂ ಮರಳನ್ನು ಪೂರೈಸಲು ಅನುಮತಿ ನೀಡಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಬರುವ ವಿದೇಶಿ ವ್ಯಾಪಾರದ ಮಹಾನಿರ್ದೇಶನಾಲಯ (ಡಿಜಿಎಫ್‌ಟಿ) ತಿಳಿಸಿದೆ. 

ಅಗತ್ಯ ಆಹಾರ ವಸ್ತುಗಳ ರಫ್ತು ಕೋಟಾವನ್ನು ಶೇ 5ರಷ್ಟು ಹೆಚ್ಚಿಸಲಾಗಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.