ADVERTISEMENT

ಸಕ್ಕರೆ ಉತ್ಪಾದನೆ ಶೇ 16ರಷ್ಟು ಕುಸಿತ

ಪಿಟಿಐ
Published 2 ಜನವರಿ 2025, 14:17 IST
Last Updated 2 ಜನವರಿ 2025, 14:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ನೇ ಮಾರುಕಟ್ಟೆ ವರ್ಷದ (ಅಕ್ಟೋಬರ್‌–ಸೆಪ್ಟೆಂಬರ್‌) ಮೊದಲ ತ್ರೈಮಾಸಿಕದಲ್ಲಿ ಸಕ್ಕರೆ ಉತ್ಪಾದನೆಯು ಶೇ 16ರಷ್ಟು ಕುಸಿತವಾಗಿದೆ ಎಂದು ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘ (ಐಎಸ್‌ಎಂಎ) ತಿಳಿಸಿದೆ.

ಕಳೆದ ಮಾರುಕಟ್ಟೆ ವರ್ಷದ ಇದೇ ಅವಧಿಯಲ್ಲಿ ಕಾರ್ಖಾನೆಗಳು 113 ಲಕ್ಷ ಟನ್‌ ಸಕ್ಕರೆ ಉತ್ಪಾದಿಸಿದ್ದವು. ಈಗ 95.40 ಲಕ್ಷ ಟನ್‌ ಉತ್ಪಾದಿಸಿವೆ ಎಂದು ಹೇಳಿದೆ. 

ಈ ಬಾರಿ ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಕಬ್ಬು ಅರೆಯುವಿಕೆ ಉತ್ತಮವಾಗಿದ್ದು, 493 ಕಾರ್ಖಾನೆಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದೆ.

ADVERTISEMENT

ಕಳೆದ ಮಾರುಕಟ್ಟೆ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮೊದಲ ತ್ರೈಮಾಸಿಕದಲ್ಲಿ ಉತ್ತರ ಪ್ರದೇಶದಲ್ಲಿ 32.80 ಲಕ್ಷ ಟನ್‌, ಮಹಾರಾಷ್ಟ್ರದಲ್ಲಿ 30 ಲಕ್ಷ ಟನ್‌ ಹಾಗೂ ಕರ್ನಾಟಕದಲ್ಲಿ 20.40 ಲಕ್ಷ ಟನ್‌ ಉತ್ಪಾದನೆ ಕಡಿಮೆಯಾಗಿದೆ.

ಈ ಮಾರುಕಟ್ಟೆ ವರ್ಷದಲ್ಲಿ 280 ಲಕ್ಷ ಟನ್‌ ಸಕ್ಕರೆ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಐಎಸ್‌ಎಂಎ ಅಂದಾಜಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.