
ಪ್ರಜಾವಾಣಿ ವಾರ್ತೆ
ನವದೆಹಲಿ: ಯುಪಿಐ ಪಾವತಿ ವ್ಯವಸ್ಥೆಯನ್ನು ವಿವಿಧೆಡೆ ಜಾರಿಗೆ ತರಲು ಕೇಂದ್ರ ಸರ್ಕಾರವು ಪೂರ್ವ ಏಷ್ಯಾದ ಕೆಲವು ದೇಶಗಳು ಸೇರಿದಂತೆ ಒಟ್ಟು ಎಂಟು ದೇಶಗಳ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸೇವೆಗಳ ಕಾರ್ಯದರ್ಶಿ ಎಂ. ನಾಗರಾಜು ಶುಕ್ರವಾರ ತಿಳಿಸಿದ್ದಾರೆ.
ಯುಪಿಐ ಪಾವತಿ ವ್ಯವಸ್ಥೆಯನ್ನು ಈಗ ಭೂತಾನ್, ಸಿಂಗಪುರ, ಕತಾರ್, ಮಾರಿಷಸ್, ನೇಪಾಳ, ಯುಎಇ, ಶ್ರೀಲಂಕಾ ಮತ್ತು ಫ್ರಾನ್ಸ್ ಒಪ್ಪಿಕೊಂಡಿವೆ. ಭಾರತದ ಪಾವತಿ ವ್ಯವಸ್ಥೆಯನ್ನು ಹೆಚ್ಚು ದೇಶಗಳು ಒಪ್ಪಿಕೊಂಡರೆ ಭಾರತದ ಪ್ರವಾಸಿಗರು ಅಲ್ಲಿಗೆ ಹೋದಾಗ ಪಾವತಿ ಸುಲಭವಾಗುತ್ತದೆ.
ಬೇರೆ ಕೆಲವು ದೇಶಗಳ ಜೊತೆ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ನಡೆಸುವಾಗ ಕೇಂದ್ರ ಸರ್ಕಾರವು ಈಗ ಯುಪಿಐ ಬಗ್ಗೆಯೂ ಪ್ರಸ್ತಾಪ ಮಾಡುತ್ತಿದೆ ಎಂದು ನಾಗರಾಜು ಅವರು ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.