ಕೋಲ್ಕತ್ತ: 2024–25ರ ಆರ್ಥಿಕ ವರ್ಷದಲ್ಲಿ ದೇಶದ ಚಹಾ ರಫ್ತು ಪ್ರಮಾಣ ಶೇ 2.85ರಷ್ಟು ಹೆಚ್ಚಳವಾಗಿದೆ ಎಂದು ಚಹಾ ಮಂಡಳಿ ವರದಿ ಶನಿವಾರ ತಿಳಿಸಿದೆ.
2023-24ರ ಆರ್ಥಿಕ ವರ್ಷದಲ್ಲಿ 25.07 ಕೋಟಿ ಟನ್ ಚಹಾ ರಫ್ತಾಗಿತ್ತು. ಈ ಬಾರಿ 25.78 ಕೋಟಿ ಟನ್ ರಫ್ತಾಗಿದೆ ಎಂದು ತಿಳಿಸಿದೆ.
ಈ ಪೈಕಿ ಉತ್ತರ ಭಾರತದಿಂದ 16.12 ಕೋಟಿ ಟನ್ ಮತ್ತು ದಕ್ಷಿಣ ಭಾರತದಿಂದ 9.66 ಕೋಟಿ ಟನ್ ರಫ್ತಾಗಿದೆ.
2023–24ರ ಆರ್ಥಿಕ ವರ್ಷದಲ್ಲಿ ರಫ್ತಾದ ಪ್ರತಿ ಕೆ.ಜಿ ಚಹಾ ಬೆಲೆ ₹258 ಇತ್ತು. ಇದು ಕಳೆದ ಆರ್ಥಿಕ ವರ್ಷದಲ್ಲಿ ಶೇ 12ರಷ್ಟು ಹೆಚ್ಚಳವಾಗಿ, ₹290ರಂತೆ ರಫ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.