ADVERTISEMENT

ಆರು ತಿಂಗಳಲ್ಲಿ ಜೈವಿಕ ಇಂಧನ ವಾಹನ ತಯಾರಿಕೆ ಕಡ್ಡಾಯ: ನಿತಿನ್ ಗಡ್ಕರಿ

ಪಿಟಿಐ
Published 31 ಆಗಸ್ಟ್ 2021, 12:49 IST
Last Updated 31 ಆಗಸ್ಟ್ 2021, 12:49 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ಮುಂಬೈ: ಜೈವಿಕ ಇಂಧನ ಬಳಸಿ ಚಲಿಸುವ ವಾಹನಗಳನ್ನು ಮಾರುಕಟ್ಟೆಗೆ ಬಿಡುವುದನ್ನು ಆಟೊಮೊಬೈಲ್‌ ಕಂಪನಿಗಳಿಗೆ ಇನ್ನು ಆರು ತಿಂಗಳುಗಳಲ್ಲಿ ಕಡ್ಡಾಯಗೊಳಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಜೈವಿನ ಇಂಧನವು ಗ್ರಾಹಕರ ಪಾಲಿಗೆ ಕಡಿಮೆ ಖರ್ಚಿನದ್ದಾಗಿರುತ್ತದೆ. ಒಂದು ಲೀಟರ್ ಜೈವಿಕ ಎಥೆನಾಲ್‌ ಬೆಲೆ ₹ 65 ಮಾತ್ರ. ಇದು ಕಡಿಮೆ ಮಾಲಿನ್ಯ ಉಂಟುಮಾಡುತ್ತದೆ, ದೇಶದ ವಿದೇಶಿ ವಿನಿಮಯ ಉಳಿತಾಯದಲ್ಲಿ ನೆರವಾಗುತ್ತದೆ ಎಂದು ಗಡ್ಕರಿ ಅವರು ಹೇಳಿದ್ದಾರೆ.

‘ಜೈವಿಕ ಇಂಧನ ಬಳಸಿಯೂ ಚಲಿಸಬಲ್ಲ ವಾಹನಗಳನ್ನು ಮಾರುಕಟ್ಟೆಗೆ ಬಿಡುವುದು ಕಡ್ಡಾಯ ಎಂಬ ಆದೇಶವು ಆರು ತಿಂಗಳೊಳಗೆ ಬರಲಿದೆ’ ಎಂದು ಅವರು ತಿಳಿಸಿದ್ದಾರೆ. ಜೈವಿಕ ಇಂಧನ ಮಾರಾಟಕ್ಕೆ ವ್ಯವಸ್ಥೆ ಮಾಡುವಂತೆ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.