ADVERTISEMENT

ವಾಹನೋದ್ಯಮ: ₹83 ಲಕ್ಷ ಕೋಟಿ ಮೌಲ್ಯದ ರಫ್ತು ನಿರೀಕ್ಷೆ

ಪಿಟಿಐ
Published 4 ಅಕ್ಟೋಬರ್ 2023, 13:47 IST
Last Updated 4 ಅಕ್ಟೋಬರ್ 2023, 13:47 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಭಾರತದ ವಾಹನ ವಲಯವು 2035ರ ವೇಳೆಗೆ ₹83 ಲಕ್ಷ ಕೋಟಿ ಮೌಲ್ಯದ ರಫ್ತು ಉದ್ಯಮವಾಗಿ ಬೆಳೆಯುವ ಸಾಮರ್ಥ್ಯ  ಹೊಂದಿದೆ ಎಂದು ಅಮೆರಿಕದ ಆರ್ಥರ್‌ ಡಿ. ಲಿಟ್ಲ್‌ ಸಂಸ್ಥೆಯು ಹೇಳಿದೆ.

ತಯಾರಿಕೆ, ಹೊಸತನ ಮತ್ತು ತಂತ್ರಜ್ಞಾನ ಅಳವಡಿಕೆಯ ಮೂಲಕ ವಲಯವು ಇದನ್ನು ಸಾಧಿಸಬಹುದಾಗಿದೆ ಎಂದು ವರದಿಯಲ್ಲಿ ತಿಳಿಸಿದೆ.

ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆ ಹಾಗೂ ಜಾಗತಿಕ ಮಾರುಕಟ್ಟೆಯನ್ನು ತಲುಪುವ ನಿಟ್ಟಿನಲ್ಲಿ ಭಾರತದ ವಾಹನ ಉದ್ಯಮವು ಜಾಗತಿಕ ಕೇಂದ್ರವಾಗಿ ಬೆಳೆಯಬಲ್ಲದು. ಇದಕ್ಕೆ ಪೂರಕವಾಗಿ ಕಂಪನಿಗಳು ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷ್ಯಾದ ವ್ಯವಸ್ಥಾಪಕ ಪಾಲುದಾರ ಬಾರ್ನಿಕ್ ಚಿತ್ರನ್‌ ಮೈತ್ರಾ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.