ADVERTISEMENT

ಡೈರಿ ಉದ್ಯಮದಲ್ಲಿ ಶೇ 11ರಷ್ಟು ಬೆಳವಣಿಗೆ: ಐಸಿಆರ್‌ಎ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 19:50 IST
Last Updated 9 ನವೆಂಬರ್ 2021, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ದೇಶದ ಡೈರಿ ಉದ್ಯಮವು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇಕಡ 9ರಿಂದ ಶೇ 11ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ ಎಂದು ದೇಶಿ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಸಿದ್ಧಪಡಿಸಿರುವ ವರದಿಯೊಂದು ಹೇಳಿದೆ.

ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯುತ್ತಿರುವುದು, ಹಾಲು ಮತ್ತು ಹಾಲಿನ ಉತ್ಪನ್ನಗಳ ಬಳಕೆ ಹೆಚ್ಚುತ್ತಿರುವುದು, ನಗರೀಕರಣದ ಪರಿಣಾಮವಾಗಿ ಆಹಾರ ಬಳಕೆಯಲ್ಲಿ ಬದಲಾವಣೆಗಳು ಆಗುತ್ತಿರುವುದು ಈ ಬೆಳವಣಿಗೆಗೆ ಕಾರಣ ಎಂದು ಅದು ಹೇಳಿದೆ.

ಹಾಲಿ ಹಣಕಾಸು ವರ್ಷದಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯು ಶೇಕಡ 5ರಿಂದ ಶೇ 6ರಷ್ಟು ಹೆಚ್ಚಳ ಆಗಲಿದೆ ಎಂದು ಅದು ಅಂದಾಜು ಮಾಡಿದೆ.

ADVERTISEMENT

ಹಾಲಿನ ಬೇಡಿಕೆಯು ಶೇ 6ರಿಂದ ಶೇ 7ರ ಮಟ್ಟದಲ್ಲಿ ಸ್ಥಿರ ಏರಿಕೆ ಕಾಣಬಹುದು. ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳ ಬೇಡಿಕೆಯಲ್ಲಿ ಶೇ 13ರಿಂದ ಶೇ 15ರಷ್ಟು ಏರಿಕೆ ಆಗಬಹುದುಎಂದು ಐಸಿಆರ್‌ಎ ಉಪಾಧ್ಯಕ್ಷೆ ಶೀತಲ್ ಶರದ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.