ನವದೆಹಲಿ: ಅಮೆರಿಕ ಸರ್ಕಾರವು ಕಳೆದ ವರ್ಷದ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ನೀಡಿರುವ ಎಚ್–1ಬಿ ವೀಸಾಗಳ ಪೈಕಿ ಐದನೇ ಒಂದರಷ್ಟು ವೀಸಾಗಳು ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳ ಪಾಲಾಗಿವೆ.
ಅಮೆರಿಕದ ವಲಸೆ ಇಲಾಖೆಯ ಅಂಕಿಅಂಶಗಳ ವಿಶ್ಲೇಷಣೆಯಿಂದ ಈ ಮಾಹಿತಿ ತಿಳಿದುಬಂದಿದೆ. ಎಚ್–1ಬಿ ವೀಸಾ ವಲಸೆಯೇತರ ವೀಸಾ ಆಗಿದೆ. ಅಮೆರಿಕದ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಇದು ಅವಕಾಶ ಕಲ್ಪಿಸುತ್ತದೆ.
ಈ ಅವಧಿಯಲ್ಲಿ ಒಟ್ಟು 1.3 ಲಕ್ಷ ವೀಸಾ ವಿತರಿಸಲಾಗಿದ್ದು, ಈ ಪೈಕಿ 24,766 ವೀಸಾಗಳನ್ನು ಭಾರತದ ಐ.ಟಿ ಕಂಪನಿಗಳು ಪಡೆದುಕೊಂಡಿವೆ. ಇನ್ಫೊಸಿಸ್‌ನ 8,140 ಉದ್ಯೋಗಿಗಳಿಗೆ ಈ ವೀಸಾ ಸಿಕ್ಕಿದ್ದು, ಮುಂಚೂಣಿಯಲ್ಲಿದೆ. ಉಳಿದಂತೆ ಟಿಸಿಎಸ್ (5,274) ಹಾಗೂ ಎಚ್‌ಸಿಎಲ್ ಅಮೆರಿಕ (2,953) ಆ ನಂತರದ ಸ್ಥಾನದಲ್ಲಿವೆ.
ಅಮೆಜಾನ್ ಕಾಮ್ ಸರ್ವಿಸಸ್ ಎಲ್‌ಎಲ್‌ಸಿನ 9,265 ಉದ್ಯೋಗಿಗಳಿಗೆ ಈ ವೀಸಾ ಸಿಕ್ಕಿದೆ. ನ್ಯೂಜೆರ್ಸಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಕಾಗ್ನಿಜೆಂಟ್‌ನ 6,321 ಉದ್ಯೋಗಿಗಳು ಎಚ್–1ಬಿ ವೀಸಾ ಪಡೆದಿದ್ದಾರೆ.
ತಂತ್ರಜ್ಞಾನ ವಲಯದಲ್ಲಿ ಈ ವೀಸಾದ ಪ್ರಯೋಜನ ಪಡೆಯುವಲ್ಲಿ ಭಾರತದ ಕಂಪನಿಗಳು ಮುಂಚೂಣಿಯಲ್ಲಿವೆ. ವಿಪ್ರೊದ 1,634 ಹಾಗೂ ಟೆಕ್ ಮಹೀಂದ್ರದ 1,199 ಉದ್ಯೋಗಿಗಳಿಗೆ ಈ ವೀಸಾ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.