ADVERTISEMENT

ಡಿಜಿಟಲ್‌ ವಹಿವಾಟು ಭಾರತೀಯರ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:45 IST
Last Updated 5 ಜೂನ್ 2019, 19:45 IST
ಡಿಜಿಟಲ್‌ ಪಾವತಿ
ಡಿಜಿಟಲ್‌ ಪಾವತಿ   

ನವದೆಹಲಿ: ದೇಶದ 133 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ 3ರಷ್ಟು ಜನರು ಮಾತ್ರ ಇಂಟರ್‌ನೆಟ್‌ ಮೂಲಕ ನಾಗರಿಕ ಸೇವೆಗಳ ಶುಲ್ಕ ಪಾವತಿ, ಆನ್‌ಲೈನ್‌ ಖರೀದಿಯಂತಹ ಡಿಜಿಟಲ್ ಪಾವತಿ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ವರದಿಯಲ್ಲಿ ತಿಳಿಸಲಾಗಿದೆ.

ಸೇವಾ ಶುಲ್ಕ ಪಾವತಿ, ಸರಕು ಮತ್ತು ಸೇವೆಗಳ ಖರೀದಿ ವಿಷಯದಲ್ಲಿ ನಗದುರಹಿತ ಪಾವತಿ (ಡಿಜಿಟಲ್‌) ಸೌಲಭ್ಯ ಬಳಸುವುದರಲ್ಲಿ ಭಾರತೀಯರು, ನೆರೆಯ ಚೀನಾಗಿಂತ ತುಂಬ ಹಿಂದೆ ಇದ್ದಾರೆ. ಚೀನಾದಲ್ಲಿ ಈ ಪ್ರಮಾಣ ಶೇ 45ರಷ್ಟು ಇದ್ದರೆ, ಇಂಗ್ಲೆಂಡ್‌ ಮತ್ತು ಅಮೆರಿಕದಲ್ಲಿ ಶೇ 70ಕ್ಕಿಂತ ಹೆಚ್ಚಿಗೆ ಇದೆ. ‘ಬ್ರಿಕ್ಸ್‌’ ದೇಶಗಳಲ್ಲಿಯೂ ಸರಾಸರಿ ಶೇ 15ರಷ್ಟಿದೆ.

ಶೇ 5ರಷ್ಟು ಭಾರತೀಯರು ಮಾತ್ರ ತಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ ಮೂಲಕ ಬ್ಯಾಂಕಿಂಗ್‌ ವಹಿವಾಟು ನಡೆಸುತ್ತಾರೆ ಎಂದು ‘ಭಾರತದ ಹಣ ಪಾವತಿ ವ್ಯವಸ್ಥೆ’ಯ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಪ್ರತಿ ನೂರು ಮಂದಿಗೆ 87 ಮೊಬೈಲ್‌ಗಳು ಇರುವ ದೇಶದಲ್ಲಿ ಇಂಟರ್‌ನೆಟ್‌ ಸಂಪರ್ಕ ಜಾಲ ವಿಸ್ತರಣೆ ಮತ್ತು ಬಳಕೆಗೆ ವಿಪುಲ ಅವಕಾಶಗಳು ಇವೆ.

ತಂತ್ರಜ್ಞಾನ ವ್ಯಾಮೋಹಿ ಯುವ ತಲೆಮಾರಿನವರಲ್ಲಿ ಡಿಜಿಟಲ್‌ ವಹಿವಾಟು ಬಳಕೆ ಹೆಚ್ಚಿಸುವುದಕ್ಕೆ ಅವಕಾಶ ಇದೆ. ಜಪಾನ್‌ ಮತ್ತು ಯುರೋಪ್‌ಗೆ ಹೋಲಿಸಿದರೆ ಭಾರತದಲ್ಲಿ ಯುವ ಜನಾಂಗದ ಪ್ರಮಾಣ ಹೆಚ್ಚಿಗೆ ಇದೆ. ಡಿಜಿಟಲ್ ಪಾವತಿ ಜನ‌ಪ್ರಿಯಗೊಳಿಸಲು ಆಕರ್ಷಕ ರಿಯಾಯ್ತಿಗಳ ಕೊಡುಗೆ, ಪುರಸ್ಕಾರಗಳಂತಹ ಉತ್ತೇಜನಾ ಕ್ರಮಗಳನ್ನು ಜಾರಿಗೆ ತರಬೇಕಾಗಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.