ADVERTISEMENT

ಎಫ್‌1 ರೇಸ್‌ ಇಂಧನ ಉತ್ಪಾದನೆಗೆ ಐಒಸಿ ಸಿದ್ಧತೆ

ಪಿಟಿಐ
Published 10 ಮಾರ್ಚ್ 2024, 16:21 IST
Last Updated 10 ಮಾರ್ಚ್ 2024, 16:21 IST
   

ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತೀಯ ತೈಲ ನಿಗಮವು (ಐಒಸಿ) ಫಾರ್ಮುಲಾ ಒನ್‌ ರೇಸ್‌ನ ಕಾರುಗಳಿಗೆ ಬಳಸುವ ಪೆಟ್ರೋಲ್‌ ತಯಾರಿಸಲು ನಿರ್ಧರಿಸಿದೆ. 

ಒಡಿಶಾದಲ್ಲಿ ಇರುವ ನಿಗಮಕ್ಕೆ ಸೇರಿದ ಪರದೀಪ್ ಸಂಸ್ಕರಣಾ ಘಟಕದಲ್ಲಿ ಇನ್ನು ಮೂರು ತಿಂಗಳೊಳಗೆ ಪೆಟ್ರೋಲ್‌ ತಯಾರಿಸಲಾಗುವುದು ಎಂದು ಐಒಸಿ ಅಧ್ಯಕ್ಷ ಶ್ರೀಕಾಂತ್‌ ಮಾಧವ್‌ ವೈದ್ಯ ತಿಳಿಸಿದ್ದಾರೆ.

‘ಸದ್ಯ ಷೆಲ್‌ ಕಂಪನಿಯು ಎಫ್‌1 ರೇಸ್‌ಗೆ ಇಂಧನ ‍ಪೂರೈಸುತ್ತಿದೆ. ಅದೇ ಮಾದರಿಯಲ್ಲಿಯೇ ನಿಗಮದಿಂದಲೂ ಇಂಧನ ಪೂರೈಸಲಾಗುವುದು’ ಎಂದು ತಿಳಿಸಿದ್ದಾರೆ.

ADVERTISEMENT

ಐಒಸಿಯು ದೇಶದ ತೈಲ ಮಾರುಕಟ್ಟೆಯಲ್ಲಿ ಶೇ 40ರಷ್ಟು ಪಾಲನ್ನು ಹೊಂದಿದೆ. ಆ ಮೂಲಕ ಫಾರ್ಮುಲಾ ಒನ್‌ ರೇಸ್‌ಗೆ ಬಳಸುವ ಇಂಧನ ತಯಾರಿಸುವ ದೇಶದ ಮೊದಲ ಹಾಗೂ ವಿಶ್ವದ ಬೆರಳೆಣಿಕೆಯಷ್ಟು ಕಂಪನಿಗಳ ಪಟ್ಟಿಗೆ ಸೇರಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.