ಬೆಂಗಳೂರು: ಇಂಡಿಯನ್ ಆಯಿಲ್ ಕಂಪನಿಯ ‘ಎಕ್ಸ್‌ಟ್ರಾಪವರ್ ಫ್ಲೀಟ್ ಕಾರ್ಡ್ ಲಾಯಲ್ಟಿ ಪ್ರೋಗ್ರಾಂ’ 2025ರ ಪ್ರತಿಷ್ಠಿತ ‘ಸ್ಕೋಚ್ ಚಿನ್ನದ ಪ್ರಶಸ್ತಿ’ಗೆ ಭಾಜನವಾಗಿದೆ.
ಇಂಡಿಯನ್ ಆಯಿಲ್‌ನ ಪ್ರಮುಖ ಯೋಜನೆಯಾದ ‘ಎಕ್ಸ್‌ಟ್ರಾಪವರ್ ಫ್ಲೀಟ್ ಕಾರ್ಡ್ ಲಾಯಲ್ಟಿ ಪ್ರೋಗ್ರಾಂ’ಗೆ ಡಿಜಿಟಲ್ ಪರಿವರ್ತನೆ: ವ್ಯಾಪಾರ ಪ್ರಕ್ರಿಯೆ ಪರಿವರ್ತನೆ ವಿಭಾಗದಲ್ಲಿ ಈ ಪ್ರಶಸ್ತಿ ದೊರೆತಿದೆ ಎಂದು ತಿಳಿಸಿದೆ.
ಸ್ಕೋಚ್‌ನ 100ನೇ ಶೃಂಗಸಭೆಯಲ್ಲಿ ಇಂಡಿಯನ್ ಆಯಿಲ್‌ನ ತಂಡಕ್ಕೆ ಸ್ಕೋಚ್ ಡೆವಲಪ್‌ಮೆಂಟ್ ಫೌಂಡೇಷನ್‌ನ ಅಧ್ಯಕ್ಷ ಸಮೀರ್ ಕೊಚಾರ್ ಅವರು ಪ್ರಶಸ್ತಿ ನೀಡಿದ್ದಾರೆ.
‘ಈ ಪ್ರಶಸ್ತಿಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯಕ್ಕೆ ನಾವೀನ್ಯತೆಯನ್ನು ಹೆಚ್ಚಿಸುವ ಮತ್ತು ಗ್ರಾಹಕ ಕೇಂದ್ರಿತ ಡಿಜಿಟಲ್ ಸೇವೆಗಳನ್ನು ತಲುಪಿಸುವಲ್ಲಿ ಇಂಡಿಯನ್ ಆಯಿಲ್‌ನ ನಿರಂತರ ಪ್ರಯತ್ನಗಳನ್ನು ಗುರುತಿಸುತ್ತದೆ’ ಎಂದು ಕಂಪನಿ ಹೇಳಿದೆ.
ಆಡಳಿತ, ಹಣಕಾಸು, ತಂತ್ರಜ್ಞಾನ, ಬ್ಯಾಂಕಿಂಗ್, ಸಾಮಾಜಿಕ–ಆರ್ಥಿಕ ವಲಯಗಳಲ್ಲಿ ಉತ್ತಮ ಕೆಲಸಗಳನ್ನು ಮಾಡುವ ಸಂಸ್ಥೆಗಳಿಗೆ ಸ್ಕೋಚ್ ಸಮೂಹವು ಪ್ರಶಸ್ತಿ ನೀಡಿ ಗೌರವಿಸುತ್ತದೆ. ಇದು ಸರ್ಕಾರೇತರ ಸ್ವತಂತ್ರ ಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.