ನವದೆಹಲಿ: ‘ಭಾರತೀಯ ಅಂಚೆ ಇಲಾಖೆಯು ಅಂಚೆ ಮತ್ತು ಪಾರ್ಸೆಲ್ ಸೇವೆಗಳನ್ನು ನಿಗದಿತ ಗಡುವಿನಲ್ಲಿ ಗ್ರಾಹಕರಿಗೆ ತಲುಪಿಸುವ ಹೊಸ ಯೋಜನೆಗಳಿಗೆ ಜನವರಿಯಲ್ಲಿ ಚಾಲನೆ ನೀಡಲಿದೆ’ ಎಂದು ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶುಕ್ರವಾರ ಹೇಳಿದ್ದಾರೆ.
ಪತ್ರಗಳು ಮತ್ತು ಪಾರ್ಸೆಲ್‌ಗಳನ್ನು 24 ಗಂಟೆಗಳಲ್ಲಿ ತಲುಪಿಸುವ ಸೇವೆ ಹಾಗೂ ಇವುಗಳನ್ನು 48 ಗಂಟೆಗಳಲ್ಲಿ ತಲುಪಿಸುವ ಸೇವೆಯನ್ನು ಜನವರಿಯಲ್ಲಿ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಈಗ ಕೆಲವು ಪಾರ್ಸೆಲ್‌ಗಳು ಗ್ರಾಹಕರನ್ನು ತಲುಪಲು 3ರಿಂದ 4 ದಿನ ತೆಗೆದುಕೊಳ್ಳುತ್ತಿದ್ದು, ಅವುಗಳನ್ನು ಮರುದಿನವೇ ಗ್ರಾಹಕರಿಗೆ ತಲುಪಿಸುವ ಸೇವೆ ಕೂಡ ಶುರುವಾಗಲಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.