ADVERTISEMENT

ರಫ್ತು ಶೇ 10–12ರಷ್ಟು ಇಳಿಕೆ ಸಂಭವ

ಪಿಟಿಐ
Published 26 ಜೂನ್ 2020, 15:20 IST
Last Updated 26 ಜೂನ್ 2020, 15:20 IST
ರಫ್ತು
ರಫ್ತು   

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ರಫ್ತು ವಹಿವಾಟು ಶೇ 10–12ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ರಫ್ತುದಾರರ ಸಂಘಟನೆ (ಎಫ್‌ಐಇಒ) ಹೇಳಿದೆ.

ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ರಫ್ತು ಇಳಿಕೆ ಕಾಣಲಿದೆ. ಎರಡನೇ ಹಂತದಲ್ಲಿ ಸೋಂಕು ಹರಡಿದರೆ ಆಗ ಕುಸಿತವು ಶೇ 20ಕ್ಕೆ ತಲುಪಲಿದೆ.

ಚೀನಾ ವಿರೋಧಿ ಭಾವನೆ ಇರುವ ಹಲವು ದೇಶಗಳಿಂದ ಉತ್ಪನ್ನಗಳಿಗಾಗಿ ಬೇಡಿಕೆ ಬರುತ್ತಿದೆ. ಕಾರ್ಮಿಕರನ್ನು ಅವಲಂಬಿಸಿರುವ ವಲಯಗಳಲ್ಲಿ ಬೇಡಿಕೆಯು ಸವಾಲಿನಿಂದ ಕೂಡಿದೆ.

ADVERTISEMENT

ಲಾಕ್‌ಡೌನ್‌ನಿಂದ ಎದುರಾಗಿರುವ ಸವಾಲುಗಳು ಮತ್ತು ಜಾಗತಿಕ ವ್ಯಾಪಾರದಲ್ಲಿ ಆಗಲಿರುವ ಇಳಿಕೆಯನ್ನು ಗಮನದಲ್ಲಿ ಇಟ್ಟುಕೊಂಡು ಭಾರತದ ರಫ್ತು ಶೇ 20ರಷ್ಟು ಕುಸಿತ ಕಾಣುವ ಅಂದಾಜು ಮಾಡಲಾಗಿತ್ತು. ಆದರೆ, ವಿಶ್ವ ವ್ಯಾಪಾರ ಸಂಘಟನೆಯು (ಡಬ್ಲ್ಯುಟಿಒ) ಎರಡನೇ ತ್ರೈಮಾಸಿಕದಲ್ಲಿ ಶೇ 13ರಷ್ಟು ಇಳಿಕೆ ಕಾಣಲಿದೆ ಎಂದು ಹೇಳಿದೆ. ಹೀಗಾಗಿ ಪರಿಷ್ಕರಣೆ ಮಾಡಲಾಗಿದೆ’ ಎಂದು ಸಂಘಟನೆಯ ಅಧ್ಯಕ್ಷ ಎಸ್‌.ಕೆ. ಶರಫ್‌ ಅವರು ಹೇಳಿದ್ದಾರೆ.

ರಫ್ತು ವಹಿವಾಟು

60 % -ಏಪ್ರಿಲ್‌ನಲ್ಲಿ ಇಳಿಕೆ

4.78 % -2019-20ರಲ್ಲಿ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.