ADVERTISEMENT

ಫೆಬ್ರುವರಿಯಲ್ಲಿ ಇಂಧನ ಬೇಡಿಕೆ ಶೇ 5.4ರಷ್ಟು ಹೆಚ್ಚಳ

ರಾಯಿಟರ್ಸ್
Published 10 ಮಾರ್ಚ್ 2022, 11:04 IST
Last Updated 10 ಮಾರ್ಚ್ 2022, 11:04 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ದೇಶದ ಇಂಧನ ಬೇಡಿಕೆಯು 2021ರ ಫೆಬ್ರುವರಿಗೆ ಹೋಲಿಸಿದರೆ 2022ರ ಫೆಬ್ರುವರಿಯಲ್ಲಿ ಶೇಕಡ 5.4ರಷ್ಟು ಹೆಚ್ಚಾಗಿದೆ. 2021ರ ಆಗಸ್ಟ್‌ ಬಳಿಕ ಬೇಡಿಕೆಯಲ್ಲಿ ಈ ಪ್ರಮಾಣದ ಹೆಚ್ಚಳ ಕಂಡುಬಂದಿದೆ.

ಪೆಟ್ರೋಲಿಯಂ ಸಚಿವಾಲಯದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ದ (ಪಿಪಿಎಸಿ) ಪ್ರಕಾರ, 2022ರ ಫೆಬ್ರುವರಿಯಲ್ಲಿ ಇಂಧನ ಬೇಡಿಕೆಯು 1.75 ಕೋಟಿ ಟನ್‌ ಆಗಿದೆ.

2022ರ ಫೆಬ್ರುವರಿಯಲ್ಲಿ ಪೆಟ್ರೋಲ್‌ ಮಾರಾಟ ಶೇ 3.2ರಷ್ಟು ಹೆಚ್ಚಾಗಿದೆ. ಡೀಸೆಲ್‌ ಮಾರಾಟ ಶೇ 0.9ರಷ್ಟು ಇಳಿಕೆ ಕಂಡಿದೆ. ಅಡುಗೆ ಅನಿಲ (ಎಲ್‌ಪಿಜಿ) ಮಾರಾಟವು 2022ರ ಫೆಬ್ರುವರಿಯಲ್ಲಿ ಶೇ 6.1ರಷ್ಟು ಹೆಚ್ಚಾಗಿ 24 ಲಕ್ಷ ಟನ್‌ಗೆ ತಲುಪಿದೆ.

ADVERTISEMENT

ರಷ್ಯಾದಿಂದ ತೈಲ ಪೂರೈಕೆಗೆ ಅಡ್ಡಿ ಆದಲ್ಲಿ, ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳಬಹುದು. ಹೀಗಾಗಿ ಭಾರತಕ್ಕೆ ತೈಲ ಪೂರೈಕೆ ಸಮಸ್ಯೆ ಎದುರಾಗುವುದಿಲ್ಲ ಎಂದು ರಿಫಿನಿಟಿವ್‌ ಕಂಪನಿಯ ವಿಶ್ಲೇಷಕ ಎಹ್ಸಾನ್‌ ಉಲ್‌ ಹಕ್‌ ಹೇಳಿದ್ದಾರೆ.

ಚುನಾವಣೆಗಳು ಮುಗಿದಿದ್ದು, ಜನಸಾಮಾನ್ಯರು ಪೆಟ್ರೋಲ್, ಡೀಸೆಲ್‌ ದರ ಏರಿಕೆಯ ಬಿಸಿ ಅನುಭವಿಸಬೇಕಾಗಿ ಬರಲಿದೆ. ಇದರಿಂದಾಗಿ ಬೇಡಿಕೆಯು ತಗ್ಗುವ ಸಾಧ್ಯತೆ ಇದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.