ADVERTISEMENT

ಸೆಪ್ಟೆಂಬರ್‌ ತ್ರೈಮಾಸಿಕ: ಎಚ್‌ಡಿಎಫ್‌ಸಿ ಬ್ಯಾಂಕ್‌ ಲಾಭ ಶೇ 22ರಷ್ಟು ಹೆಚ್ಚಳ

ಏಜೆನ್ಸೀಸ್
Published 15 ಅಕ್ಟೋಬರ್ 2022, 10:35 IST
Last Updated 15 ಅಕ್ಟೋಬರ್ 2022, 10:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್‌ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹11,125 ಕೋಟಿ ನಿವ್ವಳ ಲಾಭ ಗಳಿಸಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ ₹9,096 ಕೋಟಿ ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಲಾಭವು ಶೇ 22.30ರಷ್ಟು ಹೆಚ್ಚಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಬ್ಯಾಂಕ್‌ನ ಒಟ್ಟು ವರಮಾನವು ₹38,754 ಕೋಟಿಯಿಂದ ₹46,182 ಕೋಟಿಗೆ ಏರಿಕೆ ಆಗಿದೆ. ನಿವ್ವಳ ಬಡ್ಡಿ ವರಮಾನ ₹21 ಸಾವಿರಕ್ಕೆ ತಲುಪಿದೆ.

ADVERTISEMENT

ವೆಚ್ಚವು ₹22,947 ಕೋಟಿಯಿಂದ ₹28,790 ಕೋಟಿಗೆ ಏರಿಕೆ ಆಗಿದೆ. ರಿಟೇಲ್‌, ವಾಣಿಜ್ಯ ವಿಭಾಗವನ್ನು ಒಳಗೊಂಡು ಒಟ್ಟಾರೆ ಮುಂಗಡ ನೀಡಿಕೆಯು ಶೇ 23.4ರಷ್ಟು ಬೆಳವಣಿಗೆ ಕಂಡಿದೆ. ಠೇವಣಿ ಸಂಗ್ರಹದಲ್ಲಿ ಶೇ 19ರಷ್ಟು ಬೆಳವಣಿಗೆ ಸಾಧ್ಯವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 1.35 ರಿಂದ ಶೇ 1.23ಕ್ಕೆ ಇಳಿಕೆ ಕಂಡಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಸಾಲದ ಮೊತ್ತದ ಪ್ರಮಾಣವು ಶೇ 31.87 ರಿಂದ ಶೇ 32.40ಕ್ಕೆ ಅಲ್ಪ ಏರಿಕೆ ಕಂಡಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.