ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ ದೇಶದ ಹಿಂಡಿ (ಆಯಿಲ್‌ಮೀಲ್ಸ್) ರಫ್ತು ಶೇ 21ರಷ್ಟು ಕುಸಿತವಾಗಿದೆ ಎಂದು ಭಾರತದ ಎಣ್ಣೆ ಗಿರಣಿ ಮಾಲೀಕರ ಸಂಘ (ಎಸ್‌ಇಎ) ಶುಕ್ರವಾರ ತಿಳಿಸಿದೆ.
2023–24ರ ಆರ್ಥಿಕ ವರ್ಷದಲ್ಲಿ 48.85 ಲಕ್ಷ ಟನ್ ರಫ್ತಾಗಿತ್ತು. ಇದರ ಮೌಲ್ಯ ₹15,368 ಕೋಟಿಯಷ್ಟಾಗಿತ್ತು. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 43.42 ಲಕ್ಷ ಟನ್ ರಫ್ತಾಗಿದ್ದು, ಮೌಲ್ಯವು ₹12,171 ಕೋಟಿಯಾಗಿದೆ ಎಂದು ತಿಳಿಸಿದೆ. ಮಾರಾಟದಲ್ಲಿನ ಇಳಿಕೆಯಿಂದ ರಫ್ತು ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದೆ.
ರಾಜಕೀಯ ಬಿಕ್ಕಟ್ಟಿನ ನಡುವೆಯೂ ಬಾಂಗ್ಲಾದೇಶ, ಭಾರತದ ಅತಿದೊಡ್ಡ ಹಿಂಡಿ ಆಮದು ರಾಷ್ಟ್ರವಾಗಿದೆ. 2023–24ರ ಆರ್ಥಿಕ ವರ್ಷದಲ್ಲಿ 8.92 ಲಕ್ಷ ಟನ್ ಆಮದಾಗಿತ್ತು. ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 7.42 ಲಕ್ಷ ಟನ್ ಆಮದಾಗಿದ್ದು, ಶೇ 17ರಷ್ಟು ಇಳಿಕೆಯಾಗಿದೆ ಎಂದು ತಿಳಿಸಿದೆ.
ದಕ್ಷಿಣ ಕೊರಿಯಾಗೆ 6.99 ಲಕ್ಷ ಟನ್ ಮತ್ತು ಥಾಯ್ಲೆಂಡ್‌ಗೆ 4.48 ಲಕ್ಷ ಟನ್ ರಫ್ತು ಮಾಡಲಾಗಿದ್ದು, ಕ್ರಮವಾಗಿ ಶೇ 16 ಮತ್ತು ಶೇ 25ರಷ್ಟು ರಫ್ತು ಇಳಿಕೆಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.