ADVERTISEMENT

ಸೆಪ್ಟೆಂಬರ್‌ನಲ್ಲಿ ತಾಳೆ ಎಣ್ಣೆ ಆಮದು ಶೇ 26ರಷ್ಟು ಇಳಿಕೆ

ರಾಯಿಟರ್ಸ್
ಪಿಟಿಐ
Published 13 ಅಕ್ಟೋಬರ್ 2023, 13:50 IST
Last Updated 13 ಅಕ್ಟೋಬರ್ 2023, 13:50 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು/ನವದೆಹಲಿ : ಭಾರತವು ಸೆಪ್ಟೆಂಬರ್‌ ತಿಂಗಳಿನಲ್ಲಿ 8.34 ಲಕ್ಷ ಟನ್‌ನಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿದೆ. ಆಗಸ್ಟ್‌ನಲ್ಲಿ ಆಗಿದ್ದ ಆಮದಿಗೆ ಹೋಲಿಸಿದರೆ ಶೇ 26ರಷ್ಟು ಇಳಿಕೆ ಕಂಡುಬಂದಿದೆ.

ಸೋಯಾ ಎಣ್ಣೆ ಆಮದು ಶೇ 0.1ರಷ್ಟು ಹೆಚ್ಚಾಗಿ 3.58 ಲಕ್ಷ ಟನ್‌ಗೆ ತಲುಪಿದೆ. ಸೂರ್ಯಕಾಂತಿ ಎಣ್ಣೆ ಶೇ 17.8ರಷ್ಟು ಕಡಿಮೆ ಆಗಿ 3 ಲಕ್ಷ ಟನ್‌ಗೆ ತಲುಪಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದೆ. 

2022–23ರ ನವೆಂಬರ್‌–ಸೆಪ್ಟೆಂಬರ್ ಅವಧಿಯಲ್ಲಿ ತಾಳೆ ಎಣ್ಣೆ ಆಮದು ಶೇ 29ರಷ್ಟು ಹೆಚ್ಚಾಗಿ 90.80 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ. 2021–22ರ ಇದೇ ಅವಧಿಯಲ್ಲಿ ಭಾರತವು 70.28 ಲಕ್ಷ ಟನ್‌ನಷ್ಟು ತಾಳೆ ಎಣ್ಣೆ ಆಮದು ಮಾಡಿಕೊಂಡಿತ್ತು ಎಂದು ಎಸ್‌ಇಎ ಮಾಹಿತಿ ನೀಡಿದೆ.

ಭಾರತವು, ಇಂಡೊನೇಷ್ಯಾ ಮತ್ತು ಮಲೇಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್‌ ಮತ್ತು ರಷ್ಯಾದಿಂದ ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.