ADVERTISEMENT

ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಸೇವಾ ವಲಯದ ಚಟುವಟಿಕೆ

ಪಿಟಿಐ
Published 5 ಜುಲೈ 2023, 23:30 IST
Last Updated 5 ಜುಲೈ 2023, 23:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಬೆಳವಣಿಗೆಯು ಜೂನ್‌ನಲ್ಲಿ ಮೂರು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಹೀಗಿದ್ದರೂ ಸತತ 23ನೇ ತಿಂಗಳಿನಲ್ಲಿಯೂ ಸಕಾರಾತ್ಮಕ ಚಲನೆ ಮುಂದುವರಿದಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸಂಸ್ಥೆ ಹೇಳಿದೆ.

ಸೇವಾ ವಲಯದ ಚಟುವಟಿಕೆಗಳನ್ನು ತಿಳಿಸುವ ಬಿಸಿನೆಸ್‌ ಆ್ಯಕ್ಟಿವಿಟಿ ಇಂಡೆಕ್ಸ್‌ ಮೇ ತಿಂಗಳಲ್ಲಿ 61.2 ಇದ್ದಿದ್ದು ಜೂನ್‌ನಲ್ಲಿ 58.5ಕ್ಕೆ ಇಳಿಕೆ ಕಂಡಿದೆ.

ಹೊಸ ವಹಿವಾಟುಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದು ಹಾಗೂ ಮಾರುಕಟ್ಟೆಯು ಅನುಕೂಲಕರ ಸ್ಥಿತಿಯಲ್ಲಿ ಇರುವುದರಿಂದಾಗಿ ಸಕಾರಾತ್ಮಕ ಚಲನೆ ಮುಂದುವರಿದಿದೆ ಎಂದು ಅದು ತಿಳಿಸಿದೆ.

ADVERTISEMENT

ತಯಾರಿಕಾ ವಲಯವನ್ನೂ ಒಳಗೊಂಡು ಖಾಸಗಿ ವಲಯದಲ್ಲಿ ತಯಾರಾದ ಉತ್ಪನ್ನಗಳ ದರವು ದಶಕದದಲ್ಲೇ ವೇಗದ ಏರಿಕೆ ಕಂಡಿದೆ ಎಂದು ಎಸ್‌ಆ್ಯಂಡ್‌ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜೆನ್ಸ್‌ನ ಅರ್ಥಶಾಸ್ತ್ರದ ಸಹಾಯಕ ನಿರ್ದೇಶಕಿ ಪಾಲಿಯಾನ ಡಿ. ಲಿಮಾ ಹೇಳಿದ್ದಾರೆ.

ಹತ್ತರಲ್ಲಿ ಒಂದು ಕಂಪನಿಯು ಕಾರ್ಯಾಚರಣಾ ವೆಚ್ಚ ಗರಿಷ್ಠ ಮಟ್ಟದಲ್ಲಿ ಇರುವುದಾಗಿ ಹೇಳಿದೆ. ಆಹಾರ, ನಿರ್ಮಾಣ ವಸ್ತುಗಳು ಮತ್ತು ವೇತನಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವೆಚ್ಚ ಮಾಡಲಾಗಿದೆ ಎಂದು ಹೇಳಿದೆ. ಉಳಿದ ಕಂಪನಿಗಳು ಕಳೆದ ತಿಂಗಳಿನಷ್ಟೇ ವೆಚ್ಚ ಮಾಡಿರುವುದಾಗಿ ತಿಳಿಸಿವೆ.

ತಯಾರಿಕೆ ಮತ್ತು ಸೇವೆಗಳ ಒಟ್ಟು ಬೆಳವಣಿಗೆಯನ್ನು ತಿಳಿಸುವ ಕಂಪೋಸಿಟ್‌ ಪಿಎಂಐ ಔಟ್‌ಪುಟ್ ಇಂಡೆಕ್ಸ್‌ ಮೇ ತಿಂಗಳಿನಲ್ಲಿ 61.6ರಷ್ಟು ಇದ್ದಿದ್ದು ಜೂನ್‌ನಲ್ಲಿ 59.4ಕ್ಕೆ ಇಳಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.