ADVERTISEMENT

ಸೇವಾ ಚಟುವಟಿಕೆ ಸದೃಢ: ಮಾಸಿಕ ಸಮೀಕ್ಷಾ ವರದಿ

ಪಿಟಿಐ
Published 5 ಮಾರ್ಚ್ 2025, 13:40 IST
Last Updated 5 ಮಾರ್ಚ್ 2025, 13:40 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೇಶದ ಸೇವಾ ವಲಯದ ಚಟುವಟಿಕೆಯು ಫೆಬ್ರುವರಿ ತಿಂಗಳಲ್ಲಿ ಸದೃಢವಾದ ಬೆಳವಣಿಗೆ ದಾಖಲಿಸಿದೆ ಎಂದು ಎಸ್‌ ಆ್ಯಂಡ್ ಪಿ ಗ್ಲೋಬಲ್ ಸಂಸ್ಥೆಯ ಮಾಸಿಕ ಸಮೀಕ್ಷಾ ವರದಿ ಬುಧವಾರ ತಿಳಿಸಿದೆ.

ಜನವರಿಯಲ್ಲಿ ಸೂಚ್ಯಂಕವು 56.5 ದಾಖಲಾಗಿತ್ತು. ಫೆಬ್ರುವರಿಯಲ್ಲಿ 59.0 ದಾಖಲಾಗಿದೆ. ದೇಶೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದ ಬೇಡಿಕೆಯು ಈ ವಲಯದ ವಿಸ್ತರಣೆಗೆ ಉತ್ತೇಜನ ನೀಡಿದೆ. ಇದು ನೇಮಕಾತಿ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.

ಪರ್ಚೇಸಿಂಗ್ ಮ್ಯಾನೇಜರ್ಸ್ ಸೂಚ್ಯಂಕವು (ಪಿಎಂಐ) 50ರ ಮೇಲಿದ್ದರೆ ಬೆಳವಣಿಗೆಯು ಸದೃಢವಾಗಿದೆ ಎಂದು ಅರ್ಥೈಸಲಾಗುತ್ತದೆ. 50ಕ್ಕಿಂತ ಕಡಿಮೆ ಇದ್ದರೆ ಬೆಳವಣಿಗೆಯು ಕುಂಠಿತವಾಗಿದೆ ಎಂದು ಅರ್ಥೈಸಲಾಗುತ್ತದೆ. 

ADVERTISEMENT

‘ಜನವರಿಯಲ್ಲಿ ಸೂಚ್ಯಂಕವು 26 ತಿಂಗಳ ಕನಿಷ್ಠ ಮಟ್ಟಕ್ಕೆ ದಾಖಲಾಗಿತ್ತು. ಫೆಬ್ರುವರಿಯಲ್ಲಿ ಚೇತರಿಕೆ ಕಂಡಿದೆ. ಹೊಸ ಆರ್ಡರ್‌ಗಳು ಹೆಚ್ಚಿವೆ. ಹೆಚ್ಚಿದ ಬೇಡಿಕೆಯಿಂದಾಗಿ ಕಂಪನಿಗಳಿಂದ ಹೊಸ ನೇಮಕಾತಿ ನಡೆದಿದೆ’ ಎಂದು ಎಚ್‌ಎಸ್‌ಬಿಸಿ ಇಂಡಿಯಾದ ಮುಖ್ಯ ಅರ್ಥಶಾಸ್ತ್ರಜ್ಞ ಪ್ರಂಜುಲ್ ಭಂಡಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.