ADVERTISEMENT

ಹೂಡಿಕೆದಾರರಿಂದ ₹ 5,225 ಕೋಟಿ ಬಂಡವಾಳ ಸಂಗ್ರಹ: ಸ್ವಿಗ್ಗಿ

ರಾಯಿಟರ್ಸ್
Published 24 ಜನವರಿ 2022, 15:54 IST
Last Updated 24 ಜನವರಿ 2022, 15:54 IST
ಸ್ವಿಗ್ಗಿ
ಸ್ವಿಗ್ಗಿ   

ಬೆಂಗಳೂರು: ಆಹಾರ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸ್ವಿಗ್ಗಿ ಕಂಪನಿಯು ಹೂಡಿಕೆದಾರರಿಂದ ₹ 5,225 ಕೋಟಿ ಬಂಡವಾಳ ಸಂಗ್ರಹ ಮಾಡಿರುವುದಾಗಿ ಸೋಮವಾರ ತಿಳಿಸಿದೆ.

ದೇಶದಲ್ಲಿ ಆಹಾರ ಮತ್ತು ದಿನಸಿ ವಸ್ತುಗಳನ್ನು ತ್ವರಿತವಾಗಿ ವಿತರಣೆ ಮಾಡುವುದರಲ್ಲಿ ಕಂಪನಿಗಳ ಮಧ್ಯೆ ಪೈಪೋಟಿ ತೀವ್ರಗೊಂಡಿರುವುದರಿಂದ ಬಂಡವಾಳ ಸಂಗ್ರಹ ಮಾಡಿರುವುದಾಗಿ ಅದು ಹೇಳಿಕೊಂಡಿದೆ.

ಅಮೆರಿಕದ ಇನ್‌ವೆಸ್ಕೊ ಒಳಗೊಂಡು ಬಾರನ್‌ ಕ್ಯಾಪಿಟಲ್ ಗ್ರೂಪ್‌, ಸುಮೇರು ವೆಂಚರ್‌, ಐಐಎಫ್‌ಎಲ್‌ ಮತ್ತು ಕೋಟಕ್‌ ನಿಂದ ಬಂಡವಾಳ ಸಂಗ್ರಹ ಮಾಡಿರುವುದಾಗಿ ತಿಳಿಸಿದೆ.

ADVERTISEMENT

ದಿನಸಿ ವಸ್ತುಗಳನ್ನು ತಲುಪಿಸುವ ತನ್ನ ಇನ್‌ಸ್ಟಾಮಾರ್ಟ್‌ ಸೇವೆಯ ವಾರ್ಷಿಕ ಜಿಎಂವಿ ಮುಂದಿನ ಮೂರು ತ್ರೈಮಾಸಿಕಗಳಲ್ಲಿ ₹ 7,464 ಕೋಟಿಗೆ ತಲುಪಲಿದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.