ADVERTISEMENT

ಇಂಡಿಗೊ, ವಿಸ್ತಾರ ವಿಮಾನಗಳಲ್ಲಿ ಸಮಸ್ಯೆ: ವರದಿ ಕೇಳಿದ ಡಿಜಿಸಿಎ

​ಪ್ರಜಾವಾಣಿ ವಾರ್ತೆ
Published 6 ಜುಲೈ 2022, 13:57 IST
Last Updated 6 ಜುಲೈ 2022, 13:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಂಡಿಗೊ ಮತ್ತು ವಿಸ್ತಾರ ವಿಮಾನಯಾನ ಸಂಸ್ಥೆಗಳಲ್ಲಿನ ವಿಮಾನಗಳಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳ ಕುರಿತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಮಂಗಳವಾರ ಎರಡೂ ಸಂಸ್ಥೆಗಳಿಂದ ವರದಿ ಕೇಳಿದೆ.

ಜುಲೈ 6ರಂದು ರಾಯ್‌ಪುರದಿಂದ ಇಂದೋರ್‌ಗೆ ಪ್ರಯಾಣ ಬೆಳೆಸಿದ್ದ ಇಂಡಿಗೊ ವಿಮಾನವು ಲ್ಯಾಂಡಿಂಗ್ ಆದನಂತರ ಅದರ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು.ಅದೇ ದಿನ ನಡೆದ ಪ್ರತ್ಯೇಕ ಘಟನೆಯಲ್ಲಿ ಬ್ಯಾಂಕಾಂಕ್‌ನಿಂದ ಬಂದಿದ್ದ ವಿಸ್ತಾರ ಸಂಸ್ಥೆಯ ವಿಮಾನವು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ವಿಮಾನದ ಎಂಜಿನ್‌ನಲ್ಲಿ ಸಣ್ಣದೊಂದು ತಾಂತ್ರಿಕ ದೋಷ ಸಂಭವಿಸಿತ್ತು.

ಈ ಹಿನ್ನೆಲೆಯಲ್ಲಿ ಡಿಜಿಸಿಎ ಎರಡೂ ವಿಮಾನಯಾನ ಸಂಸ್ಥೆಗಳಿಂದ ವರದಿ ಕೇಳಿದೆ.

ADVERTISEMENT

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ವಿಸ್ತಾರದ ವಕ್ತಾರ, ‘ದೆಹಲಿಗೆ ಬಂದಿಳಿದ ಬಳಿಕ ವಿಮಾನದಲ್ಲಿ ಸಣ್ಣದೊಂದು ವಿದ್ಯುತ್ ದೋಷ ಕಾಣಿಸಿಕೊಂಡಿತ್ತು. ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.