ADVERTISEMENT

ದೇಶದ ಕೈಗಾರಿಕಾ ಉತ್ಪಾದನೆ ಶೇ 1.3ರಷ್ಟು ಬೆಳವಣಿಗೆ

ಪಿಟಿಐ
Published 11 ಮಾರ್ಚ್ 2022, 15:42 IST
Last Updated 11 ಮಾರ್ಚ್ 2022, 15:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಗಣಿಗಾರಿಕೆ ಮತ್ತು ತಯಾರಿಕಾ ವಲಯದ ಉತ್ತಮ ಬೆಳವಣಿಗೆಯಿಂದಾಗಿ ದೇಶದ ಕೈಗಾರಿಕಾ ಉತ್ಪಾದನೆಯು ಜನವರಿಯಲ್ಲಿ ಶೇ 1.3ಕ್ಕೆ ಏರಿಕೆ ಆಗಿದೆ.

2021ರ ಜನವರಿಯಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಶೇ (–) ಶೇ 0.6ಕ್ಕೆ ಇಳಿಕೆ ಕಂಡಿತ್ತು ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮಾಹಿತಿ ನೀಡಿದೆ.

ಗಣಿಗಾರಿಕೆ ವಲಯದ ಬೆಳವಣಿಗೆಯು ಶೇ 2.4ರಿಂದ ಶೇ 2.8ಕ್ಕೆ ಏರಿಕೆ ಆಗಿದೆ. ಅದೇ ರೀತಿ ತಯಾರಿಕಾ ವಲಯದ ಬೆಳವಣಿಗೆಯು ಶೇ 0.9ರಿಂದ ಶೇ 1.1ಕ್ಕೆ ಏರಿಕೆ ಆಗಿದೆ. ಆದರೆ, ವಿದ್ಯುತ್ ಉತ್ಪಾದನೆ ಶೇ 5.5ರಿಂದ ಶೇ 0.9ಕ್ಕೆ ಕುಸಿತ ಕಂಡಿದೆ.

ADVERTISEMENT

ಬಂಡವಾಳ ಸರಕು ಮತ್ತು ಗ್ರಾಹಕ ಬಳಕೆ ವಸ್ತುಗಳ ವಲಯಗಳ ಬೆಳವಣಿಗೆಯು ಇಳಿಕೆ ಕಂಡಿದೆ. ಐಐಪಿಗೆ ಶೇ 34ರಷ್ಟು ಕೊಡುಗೆ ನೀಡುವ ಪ್ರಾಥಮಿಕ ಸರಕುಗಳ ವಲಯವು ಶೇ 1.6ರಷ್ಟು ಬೆಳವಣಿಗೆ ಕಂಡಿದೆ. ಹಿಂದಿನ ವರ್ಷದ ಜನವರಿಯಲ್ಲಿ ಶೇ 0.7ರಷ್ಟು ಬೆಳವಣಿಗೆ ಕಂಡಿತ್ತು.

ಕೋವಿಡ್‌ ಕಾರಣದಿಂದಾಗಿ ಹಲವು ತಿಂಗಳವರೆಗೆ ಕುಸಿತ ಕಂಡಿದ್ದ ಐಐಪಿ ಬೆಳವಣಿಗೆಯು 2021ರ ಮಾರ್ಚ್‌ ತಿಂಗಳಿನಿಂದ ಸಕಾರಾತ್ಮಕ ಹಾದಿಯಲ್ಲಿ ಸಾಗುತ್ತಿದೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌–ಜನವರಿ ಅವಧಿಯಲ್ಲಿ ಐಐಪಿ ಶೇ 12ರಿಂದ ಶೇ 13.7ಕ್ಕೆ ಏರಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.