ನವದೆಹಲಿ: ದೇಶದ ಕೈಗಾರಿಕಾ ವಲಯದ ತಯಾರಿಕೆಯು ಫೆಬ್ರುವರಿಯಲ್ಲಿ ಶೇ 4.5ರಷ್ಟು ಬೆಳವಣಿಗೆ ಕಂಡಿದೆ. ಇದು ಏಳು ತಿಂಗಳ ಗರಿಷ್ಠ ಮಟ್ಟವಾಗಿದೆ.
ಗಣಿ ಮತ್ತು ತಯಾರಿಕಾ ಚಟು ವಟಿಕೆಗಳು ಚುರುಕು ಪಡೆದುಕೊಂಡಿದ್ದ ರಿಂದ ಈ ಬೆಳವಣಿಗೆ ಸಾಧ್ಯವಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಮಾಹಿತಿ ನೀಡಿದೆ. ಕೈಗಾರಿಕಾ ಉತ್ಪಾ ದನಾ ಸೂಚ್ಯಂಕದ (ಐಐಪಿ) ಅಧಾರದ ಮೇಲೆ ಲೆಕ್ಕ ಹಾಕುವ ಕೈಗಾರಿಕಾ ಬೆಳವಣಿಗೆಯು 2019ರ ಫೆಬ್ರುವರಿಯಲ್ಲಿ ಶೇ 0.2ರಷ್ಟು ಅಲ್ಪ ಬೆಳವಣಿಗೆ ಸಾಧಿಸಿತ್ತು. 2019ರ ಜುಲೈನಲ್ಲಿ ಶೇ 4.9ರಷ್ಟು ಗರಿಷ್ಠ ಪ್ರಗತಿ ಕಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.