ನವದೆಹಲಿ: ದೇಶದ ಕೈಗಾರಿಕಾ ಉತ್ಪಾದನೆಯು ಸತತ ಎರಡನೇ ತಿಂಗಳಿನಲ್ಲಿಯೂ ಇಳಿಕೆ ಕಂಡಿದೆ. ತಯಾರಿಕೆ ಮತ್ತು ಗಣಿ ವಲಯಗಳು ಕಂಡ ಇಳಿಕೆಯಿಂದಾಗಿ ಕೈಗಾರಿಕಾ ಉತ್ಪಾದನೆಯು ಫೆಬ್ರುವರಿಯಲ್ಲಿ ಶೇಕಡ 3.6ರಷ್ಟು ಇಳಿಕೆ ಆಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಮಾಹಿತಿ ಬಿಡುಗಡೆ ಮಾಡಿದೆ.
2020ರ ಫೆಬ್ರುವರಿಯಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 5.2ರಷ್ಟು ಬೆಳವಣಿಗೆ ಕಂಡಿತ್ತು.
ಕೈಗಾರಿಕಾ ಉತ್ಪಾದನಾ ಸೂಚ್ಯಂಕಕ್ಕೆ (ಐಐಪಿ) ಶೇ 77.63ರಷ್ಟು ಕೊಡುಗೆ ನೀಡುವ ತಯಾರಿಕಾ ವಲಯದ ಬೆಳವಣಿಗೆಯು ಫೆಬ್ರುವರಿಯಲ್ಲಿ ಶೇ 3.7ರಷ್ಟು ಇಳಿಕೆ ಆಗಿದೆ. ಗಣಿ ವಲಯದ ಚಟುವಟಿಕೆಯು ಶೇ 5.5ರಷ್ಟು ಇಳಿಕೆ ಕಂಡಿದೆ.
ಕೈಗಾರಿಕಾ ಉತ್ಪಾದನೆಯು ಕೋವಿಡ್ ಕಾರಣದಿಂದಾಗಿ 2020ರ ಮಾರ್ಚ್‌ನಲ್ಲಿ ಶೇ 18.7ರಷ್ಟು ಕುಸಿತ ಕಂಡಿತ್ತು. 2020ರ ಆಗಸ್ಟ್‌ವರೆಗೂ ನಕಾರಾತ್ಮಕ ಮಟ್ಟದಲ್ಲಿಯೇ ಇತ್ತು.
2019–20ರ ಏಪ್ರಿಲ್–ಫೆಬ್ರುವರಿ ಅವಧಿಗೆ ಹೋಲಿಸಿದರೆ 2020–21ರ ಏಪ್ರಿಲ್–ಫೆಬ್ರುವರಿಯ ಅವಧಿಯಲ್ಲಿ ಐಐಪಿ ಶೇ 11.3ರಷ್ಟು ಇಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.