ADVERTISEMENT

ನವೆಂಬರ್‌ನಲ್ಲಿ ಕೈಗಾರಿಕೆ ಉತ್ಪಾದನೆ ಹೆಚ್ಚಳ

ಪಿಟಿಐ
Published 10 ಜನವರಿ 2020, 16:57 IST
Last Updated 10 ಜನವರಿ 2020, 16:57 IST
ಕೈಗಾರಿಕೆ
ಕೈಗಾರಿಕೆ   

ನವದೆಹಲಿ: ನವೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆಯು ಶೇ 1.8ರಷ್ಟು ಪ್ರಗತಿ ಕಂಡಿದೆ.

ತಯಾರಿಕೆ ವಲಯದಲ್ಲಿ ಹೆಚ್ಚಿದ ಚಟುವಟಿಕೆ ಫಲವಾಗಿ, ಮೂರು ತಿಂಗಳ ಸತತ ಕುಸಿತದ ನಂತರ ಪ್ರಗತಿ ಸಾಧಿಸಿದೆ.

ತಯಾರಿಕಾ ವಲಯವು ಶೇ 2.7ರಷ್ಟು ಬೆಳವಣಿಗೆ ಕಂಡಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿ ಇದು ಶೇ 0.7ರಷ್ಟು ಕುಸಿದಿತ್ತು. ವಿದ್ಯುತ್‌ ಉತ್ಪಾದನೆಯು ವರ್ಷದ ಹಿಂದಿನ ಶೇ 5ರಷ್ಟು ಬೆಳವಣಿಗೆಗೆ ಹೋಲಿಸಿದರೆ ಈ ಬಾರಿ ಶೇ 5ರಷ್ಟು ಕುಸಿತ ಕಂಡಿದೆ. ಗಣಿಗಾರಿಕೆ ವಲಯವೂ ಶೇ 1.7ರಷ್ಟು ಕುಸಿದಿದೆ.

ADVERTISEMENT

ಈ ಹಣಕಾಸು ವರ್ಷದ ಏಪ್ರಿಲ್‌ – ನವೆಂಬರ್‌ ಅವಧಿಯಲ್ಲಿ ಕೈಗಾರಿಕಾ ತಯಾರಿಕಾ ಸೂಚ್ಯಂಕದ (ಐಐಪಿ) ಬೆಳವಣಿಗೆಯು ಶೇ 0.6ರಷ್ಟಾಗಿದೆ. ವರ್ಷದ ಹಿಂದೆ ಇದು ಶೇ 5ರಷ್ಟಿತ್ತು. 2018ರ ನವೆಂಬರ್‌ನಲ್ಲಿ (ಐಐಪಿ) ಶೇ 0.2ರಷ್ಟು ಹೆಚ್ಚಳ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.