ADVERTISEMENT

ದೂರಸಂಪರ್ಕ ಉದ್ಯಮಕ್ಕೆ ಬೆಂಬಲ ಅಗತ್ಯ: ಸುನಿಲ್ ಮಿತ್ತಲ್

ಪಿಟಿಐ
Published 10 ಆಗಸ್ಟ್ 2021, 10:56 IST
Last Updated 10 ಆಗಸ್ಟ್ 2021, 10:56 IST

ನವದೆಹಲಿ: ದೂರಸಂಪರ್ಕ ಉದ್ಯಮ ವಲಯವನ್ನು ಮುಂದೆಯೂ ಹೂಡಿಕೆಗೆ ಯೋಗ್ಯವಾದ ಕ್ಷೇತ್ರವಾಗಿ ಉಳಿಸಲು ಕೇಂದ್ರ ಸರ್ಕಾರ ಹಾಗೂ ನಿಯಂತ್ರಣ ಸಂಸ್ಥೆಗಳು ಕ್ರಮ ಕೈಗೊಳ್ಳಲಿವೆ ಎಂಬ ಭರವಸೆಯನ್ನು ಭಾರ್ತಿ ಏರ್‌ಟೆಲ್‌ ಕಂಪನಿಯ ಅಧ್ಯಕ್ಷ ಸುನಿಲ್ ಮಿತ್ತಲ್ ವ್ಯಕ್ತಪಡಿಸಿದ್ದಾರೆ.

ಉದ್ಯಮದಲ್ಲಿ ಈಗಿನಂತೆಯೇ ನಾಲ್ಕು ಕಂಪನಿಗಳು ಉಳಿದುಕೊಳ್ಳಬೇಕು ಎಂದಾದಲ್ಲಿ ದೀರ್ಘಾವಧಿಯ ಬೆಂಬಲದ ಅಗತ್ಯ ಇದೆ ಎಂದು ಹೇಳಿದ್ದಾರೆ.

ಸುಸ್ಥಿರವಲ್ಲದ ಶುಲ್ಕ ನಿಗದಿ, ಭಾರಿ ಬಂಡವಾಳ ಹೂಡಿಕೆ ಮಾಡಿದ್ದರೂ ತೀರಾ ಕಡಿಮೆ ಲಾಭ ಬರುತ್ತಿರುವುದು, ದಶಕಗಳಿಂದ ಉಳಿದಿರುವ ಕಾನೂನು ತೊಡಕುಗಳು ಉದ್ಯಮ ಬೆಲೆ ತೆರುವಂತೆ ಮಾಡಿವೆ ಎಂದು ಮಿತ್ತಲ್ ಅವರು ಏರ್‌ಟೆಲ್‌ನ 2020–21ನೇ ಸಾಲಿನ ವಾರ್ಷಿಕ ವರದಿಯಲ್ಲಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.