ADVERTISEMENT

ಹಣದುಬ್ಬರ ನಿಯಂತ್ರಣ ಎಡಿಬಿ ಅಂದಾಜು

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 20:00 IST
Last Updated 21 ಜುಲೈ 2019, 20:00 IST
   

ನವದೆಹಲಿ (ಪಿಟಿಐ): ಪ್ರಸಕ್ತ ಹಣಕಾಸು ವರ್ಷದಲ್ಲಿ (2019–20) ಭಾರತದಲ್ಲಿನ ಹಣದುಬ್ಬರವು ಶೇ 4.1ರಷ್ಟು ಇರಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್‌ (ಎಡಿಬಿ) ಅಂದಾಜಿಸಿದೆ.

ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯವರ್ಧನೆ ಮತ್ತು ಒಟ್ಟು ಆಂತರಿಕ ಉತ್ಪನ್ನದಲ್ಲಿನ (ಜಿಡಿಪಿ) ಕುಸಿತದ ಕಾರಣಕ್ಕೆ ಹಣದುಬ್ಬರವು ಕಡಿಮೆ ಮಟ್ಟದಲ್ಲಿ ಇರಲಿದೆ. ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಹಣದುಬ್ಬರವು ಕೆಳ ಹಂತದಲ್ಲಿ ಇರಲು ಭಾರತವೇ ಮುಖ್ಯ ಕಾರಣವಾಗಿರಲಿದೆ ಎಂದು ಬ್ಯಾಂಕ್‌ ತನ್ನ ಪೂರಕ ಅಂದಾಜಿನಲ್ಲಿ ತಿಳಿಸಿದೆ.

ಈ ವರ್ಷ ಭಾರತದ ಆರ್ಥಿಕ ವೃದ್ಧಿ ದರವು ಏಪ್ರಿಲ್‌ ತಿಂಗಳಲ್ಲಿ ಅಂದಾಜಿಸಿದ್ದ ಶೇ 7ಕ್ಕಿಂತ ಶೇ 0.2ರಷ್ಟು (ಶೇ 6.98) ಕಡಿಮೆ ಇರಲಿದೆ ಎಂದು ಏಷ್ಯಾ ಅಭಿವೃದ್ಧಿ ಮುನ್ನೋಟ ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಚಿಲ್ಲರೆ ಹಣದುಬ್ಬರವು ಶೇ 3 ರಿಂದ ಶೇ 3.1ರಷ್ಟು ಇರಲಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಕೂಡ ತನ್ನ ಇತ್ತೀಚಿನ ದ್ವೈಮಾಸಿಕ ಹಣಕಾಸು ಪರಾಮರ್ಶೆ ವರದಿಯಲ್ಲಿ ಅಂದಾಜಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.