ADVERTISEMENT

ಈಕ್ವಿಟಿ ಎಂ.ಎಫ್‌: ಹೂಡಿಕೆ ಶೇ 22 ಇಳಿಕೆ

ವ್ಯವಸ್ಥಿತಿ ಹೂಡಿಕೆ ಯೋಜನೆಗಳಲ್ಲಿ ದಾಖಲೆಯ ₹17,073 ಕೋಟಿ ಹೂಡಿಕೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2023, 16:17 IST
Last Updated 8 ಡಿಸೆಂಬರ್ 2023, 16:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ (ಎಂ.ಎಫ್‌) ಬಂಡವಾಳ ಒಳಹರಿವು ನವೆಂಬರ್‌ನಲ್ಲಿ ಶೇ 22ರಷ್ಟು ಇಳಿಕೆ ಕಂಡಿದ್ದು ₹15,536 ಕೋಟಿ ಹೂಡಿಕೆ ಆಗಿದೆ.

ಅಕ್ಟೋಬರ್‌ ತಿಂಗಳಿನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ₹19,957 ಕೋಟಿ ಹೂಡಿಕೆ ಆಗಿತ್ತು ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.

ದೀಪಾವಳಿ ಹಬ್ಬ ಮತ್ತು ಬ್ಯಾಂಕ್‌ ರಜಾ ದಿನಗಳಿಂದಾಗಿ ನವೆಂಬರ್‌ನಲ್ಲಿ ಒಳಹರಿವು ಕಡಿಮೆ ಆಯಿತು ಎಂದು ಕೋಟಕ್ ಮ್ಯೂಚುವಲ್ ಫಂಡ್‌ನ ಮಾರುಕಟ್ಟೆ ಮತ್ತು ಡಿಜಿಟಲ್‌ ವಹಿವಾಟಿನ ಮುಖ್ಯಸ್ಥ ಮನಿಷ್‌ ಮೆಹ್ತಾ ಹೇಳಿದ್ದಾರೆ.

ADVERTISEMENT

ಈಕ್ವಿಟಿ ಫಂಡ್‌ಗಳಲ್ಲಿ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್ ಫಂಡ್‌ಗಳಲ್ಲಿ ಹೆಚ್ಚಿನ ಹೂಡಿಕೆ ಆಗುತ್ತಿದೆ. ಈಕ್ವಿಟಿಗಳಲ್ಲಿ ಆಗುತ್ತಿರುವ ಒಳಹರಿವಿನಲ್ಲಿ ಮಿಡ್‌ ಮತ್ತು ಸ್ಮಾಲ್‌ ಕ್ಯಾಪ್‌ಗಳ ಪಾಲೇ ಶೇ 41ರಷ್ಟು ಇದೆ.

ಎಸ್‌ಐಪಿ ದಾಖಲೆ:

ವ್ಯವಸ್ಥಿತಿ ಹೂಡಿಕೆ ಯೋಜನೆಗಳ (ಎಸ್‌ಐಪಿ) ಮೂಲಕ ನವೆಂಬರ್‌ನಲ್ಲಿ ₹17,073 ಕೋಟಿ ಹೂಡಿಕೆ ಆಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟ ಇದಾಗಿದೆ. ಎಸ್‌ಐಪಿ ಪ್ರಯೋಜನಗಳ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಲಾರಂಭಿಸಿದೆ. ಹೀಗಾಗಿ ಹೊಸ ಹೂಡಿಕೆದಾರರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ‌ ಎಂದು ಒಕ್ಕೂಟ ಹೇಳಿದೆ.

ಆರ್ಥಿಕ ಚಟುವಟಿಕೆಗಳು ಏರಿಕೆ ಕಾಣುತ್ತಿವೆ. ಜಿಎಸ್‌ಟಿ ಸಂಗ್ರಹ ಸ್ಥಿರವಾಗಿದೆ. ಸರ್ಕಾರದ ಸುಧಾರಣಾ ಕ್ರಮಗಳು ಮತ್ತು ನೀತಿಗಳ ಗ್ಗೆ ವಿಶ್ವಾಸ ಇರುವುದರಿಂದ ಹೂಡಿಕೆದಾರರು ವಿವಿಧ ವಲಯಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಕ್ಟೋಬರ್‌ನಲ್ಲಿ ಎಸ್‌ಐಪಿಯಲ್ಲಿ ₹16,928 ಕೋಟಿ ಹೂಡಿಕೆ ಆಗಿತ್ತು. ನವೆಂಬರ್‌ನಲ್ಲಿ ₹17,073 ಕೋಟಿಗೆ ಏರಿಕೆ ಕಂಡಿದೆ ಎಂದು ಫೈರ್ಸ್‌ ಕಂಪನಿಯ ಉಪಾಧ್ಯಕ್ಷ ಗೋಪಾಲ ಕಾವಲಿರೆಡ್ಡಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.