
ಪ್ರಜಾವಾಣಿ ವಾರ್ತೆ
ನವದೆಹಲಿ: ₹18 ಸಾವಿರ ಕೋಟಿ ಮೌಲ್ಯದ ಷೇರು ಮರು ಖರೀದಿ ಪ್ರಕ್ರಿಯೆ ನವೆಂಬರ್ 20ರಿಂದ ಆರಂಭವಾಗಲಿದೆ ಎಂದು ಐ.ಟಿ ಸೇವಾ ಕಂಪನಿ ಇನ್ಫೊಸಿಸ್ ಷೇರುಪೇಟೆಗೆ ಮಂಗಳವಾರ ತಿಳಿಸಿದೆ.
10 ಕೋಟಿ (ಶೇ 2.41ರಷ್ಟು) ಈಕ್ವಿಟಿ ಷೇರುಗಳನ್ನು ಮರು ಖರೀದಿ ಮಾಡಲಾಗುತ್ತಿದೆ. ಪ್ರತಿ ಷೇರಿನ ಮುಖ ಬೆಲೆ ₹5 ಆಗಿರಲಿದೆ. ಪ್ರತಿ ಷೇರಿನ ಬೆಲೆ ₹1,800 ಇರಲಿದೆ. ನವೆಂಬರ್ 26ರಂದು ಷೇರುಗಳ ಮರು ಖರೀದಿ ಪ್ರಕ್ರಿಯೆಯು ಕೊನೆಗೊಳ್ಳಲಿದೆ ಎಂದು ತಿಳಿಸಿದೆ.
ಈಗಾಗಲೇ ಕಂಪನಿಯು 2017 ಮತ್ತು 2019ರಲ್ಲಿ ಷೇರುಗಳನ್ನು ಮರು ಖರೀದಿ ಮಾಡಿತ್ತು. ಕಂಪನಿಯ ಕಾರ್ಯಾಚರಣೆಯ ನಗದು ಅಗತ್ಯತೆಗಾಗಿ ಮರುಖರೀದಿಯನ್ನು ಕೈಗೊಳ್ಳಲಾಗುತ್ತಿದೆ ಎಂದು ಇನ್ಫೋಸಿಸ್ ತಿಳಿಸಿದೆ.
ನಂದನ್ ಎಂ ನಿಲೇಕಣಿ ಮತ್ತು ಸುಧಾ ಮೂರ್ತಿ ಸೇರಿದಂತೆ ಇನ್ಫೊಸಿಸ್ ಪ್ರವರ್ತಕರು ಮತ್ತು ಪ್ರವರ್ತಕ ಗುಂಪು ಮರುಖರೀದಿಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.