ADVERTISEMENT

ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಕೆಲವು ಬಳಕೆದಾರರಿಗೆ ಸಮಸ್ಯೆ: ಇನ್ಫೊಸಿಸ್‌

ಪಿಟಿಐ
Published 23 ಸೆಪ್ಟೆಂಬರ್ 2021, 12:38 IST
Last Updated 23 ಸೆಪ್ಟೆಂಬರ್ 2021, 12:38 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಆದಾಯ ತೆರಿಗೆ ಪೋರ್ಟಲ್ ಪ್ರವೇಶಿಸುವಲ್ಲಿಕೆಲವು ಬಳಕೆದಾರರು ಈಗಲೂ ತೊಂದರೆ ಎದುರಿಸುತ್ತಿದ್ದಾರೆ ಎಂದು ಇನ್ಫೊಸಿಸ್ ಕಂಪನಿ ಗುರುವಾರ ತಿಳಿಸಿದೆ.

ಬಳಕೆದಾರರ ಅನುಭವವನ್ನು ಮತ್ತಷ್ಟು ಸುಗಮಗೊಳಿಸಲು ಆದಾಯ ತೆರಿಗೆ ಇಲಾಖೆಯ ಸಹಯೋಗದೊಂದಿಗೆ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದಾಗಿಯೂ ಕಂಪನಿ ಹೇಳಿದೆ.

ಕಳೆದ ಕೆಲವು ವಾರಗಳಲ್ಲಿ ಜಾಲತಾಣ ಬಳಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಮೂರು ಕೋಟಿಗೂ ಹೆಚ್ಚು ತೆರಿಗೆದಾರರು ಪೋರ್ಟಲ್‌ಗೆ ಲಾಗಿನ್‌ ಆಗಿ ವಿವಿಧ ವಹಿವಾಟುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಕೆಲವು ಬಳಕೆದಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಪನಿಯು ಗುರುತಿಸಿದೆ. 1,200ಕ್ಕೂ ಅಧಿಕ ತೆರಿಗೆ ಪಾವತಿದಾರರೊಂದಿಗೆ ನೇರ ಸಂಪರ್ಕದಲ್ಲಿದ್ದು ಅವರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ನಡೆಯುತ್ತಿದೆ ಎಂದೂ ಹೇಳಿದೆ.

ಸೆಪ್ಟೆಂಬರ್‌ ತಿಂಗಳಿನಲ್ಲಿ ಪ್ರತಿ ದಿನ ಸರಾಸರಿ 15 ಲಕ್ಷ ತೆರಿಗೆ ಪಾವತಿದಾರರು ಪೋರ್ಟಲ್‌ಗೆ ಲಾಗಿನ್‌ ಆಗಿದ್ದಾರೆ. ಇದುವರೆಗೆ 1.5 ಕೋಟಿಗೂ ಅಧಿಕ ರಿಟರ್ನ್ಸ್‌ ಸಲ್ಲಿಕೆ ಆಗಿದೆ. ರಿಟರ್ನ್ಸ್‌ ಸಲ್ಲಿಸಿರುವವರಲ್ಲಿ ಶೇಕಡ 85ರಷ್ಟು ತೆರಿಗೆದಾರರು ಆಧಾರ್‌ ಒಟಿಪಿ ಮೂಲಕ ರಿಟರ್ನ್ಸ್‌ನ ಆನ್‌ಲೈನ್‌ ದೃಢೀಕರಣ ಮಾಡಿದ್ದಾರೆ ಎಂದು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.