
ನವದೆಹಲಿ: ದೇಶದ ಎಂಟು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಡಿಸೆಂಬರ್ ತಿಂಗಳಿನಲ್ಲಿ ಶೇ 3.7ರಷ್ಟು ಆಗಿದೆ. ಇದು ನಾಲ್ಕು ತಿಂಗಳ ಗರಿಷ್ಠ ಮಟ್ಟದ ಏರಿಕೆಯಾಗಿದೆ.
ರಸಗೊಬ್ಬರ ಮತ್ತು ಸಿಮೆಂಟ್ ವಲಯದ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಇದು ಬೆಳವಣಿಗೆ ಏರಿಕೆಗೆ ಕಾರಣ ಎಂದು ಸರ್ಕಾರದ ಅಂಕಿ–ಅಂಶಗಳು ಮಂಗಳವಾರ ತಿಳಿಸಿದೆ. ನವೆಂಬರ್‌ನಲ್ಲಿ ಬೆಳವಣಿಗೆ ಶೇ 2.1ರಷ್ಟಿತ್ತು.
2024ರ ಡಿಸೆಂಬರ್ ತಿಂಗಳಿನಲ್ಲಿ ಈ ವಲಯಗಳ ಬೆಳವಣಿಗೆ ಶೇ 5.1ರಷ್ಟಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಬೆಳವಣಿಗೆ ಇಳಿಕೆ ಆಗಿದೆ.
ಈ ಡಿಸೆಂಬರ್‌ನಲ್ಲಿ ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಿಸಿದ ಉತ್ಪನ್ನಗಳು, ಕಲ್ಲಿದ್ದಲು, ಉಕ್ಕು ಮತ್ತು ವಿದ್ಯುತ್ ವಲಯದಲ್ಲಿನ ಉತ್ಪಾದನೆ ಇಳಿಕೆ ಆಗಿದೆ.
ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ಈ ವಲಯಗಳ ಉತ್ಪಾದನೆಯು ಶೇ 2.6ರಷ್ಟಾಗಿದೆ. ಇದು ಕಳೆದ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಶೇ 4.5ರಷ್ಟಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.