ADVERTISEMENT

ಮೈಕ್ರೊಸಾಫ್ಟ್ ಅತ್ಯಂತ ಮೌಲ್ಯಯುತ ಕಂಪನಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2018, 17:09 IST
Last Updated 24 ನವೆಂಬರ್ 2018, 17:09 IST
ಮೈಕ್ರೊಸಾಫ್ಟ್
ಮೈಕ್ರೊಸಾಫ್ಟ್   

ಸ್ಯಾನ್‌ ಫ್ರಾನ್ಸಿಸ್ಕೊ: ಮಾರುಕಟ್ಟೆ ಮೌಲ್ಯದಲ್ಲಿಅಮೆರಿಕದ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಮೈಕ್ರೊಸಾಫ್ಟ್‌ ಹೊರಹೊಮ್ಮಿದೆ.

ಕಂಪನಿಯ ಮಾರುಕಟ್ಟೆ ಮೌಲ್ಯ ‌₹ 53.46 ಲಕ್ಷ ಕೋಟಿಗೆ ಏರಿಕೆ ಯಾಗುವ ಮೂಲಕತಂತ್ರಜ್ಞನ ದೈತ್ಯ ಸಂಸ್ಥೆಯಾಗಿರುವ ಆ್ಯಪಲ್‌ ಅನ್ನು ಹಿಂದಿಕ್ಕಿದೆ. ಆ್ಯಪಲ್‌ ಮಾರುಕಟ್ಟೆ ಮೌಲ್ಯ ₹ 52.96 ಲಕ್ಷ ಕೋಟಿ ಇದ್ದು, 2010ರ ಬಳಿಕ ಮೊದಲ ಬಾರಿಗೆ ಎರಡನೇ ಸ್ಥಾನಕ್ಕೆ ಇಳಿದಿದೆ ಎಂದುಎಂದು ಎನ್‌ಡಿ ಟಿವಿ ವರದಿ ಮಾಡಿದೆ

ಅಮೆಜಾನ್‌ ಮೂರನೇ (₹ 52.22 ಲಕ್ಷ ಕೋಟಿ ) ಹಾಗೂ ಗೂಗಲ್‌ನ ಮಾತೃಸಂಸ್ಥೆ ಅಲ್ಫಾಬೆಟ್‌ (₹ 51.47 ಲಕ್ಷ ಕೋಟಿ) ನಾಲ್ಕನೇ ಸ್ಥಾನದಲ್ಲಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.