ADVERTISEMENT

ಸಣ್ಣ ಉಳಿತಾಯದ ಬಡ್ಡಿದರ ಮತ್ತೆ ಯಥಾಸ್ಥಿತಿ

ಪಿಟಿಐ
Published 30 ಸೆಪ್ಟೆಂಬರ್ 2024, 15:37 IST
Last Updated 30 ಸೆಪ್ಟೆಂಬರ್ 2024, 15:37 IST
<div class="paragraphs"><p>ಪ್ರಾತಿನಿಧಿಕ ಚಿತ್ರ&nbsp;</p></div>

ಪ್ರಾತಿನಿಧಿಕ ಚಿತ್ರ 

   

ನವದೆಹಲಿ: ಅಕ್ಟೋಬರ್‌ 1ರಿಂದ ಆರಂಭವಾಗುವ ಮೂರನೇ ತ್ರೈಮಾಸಿಕದಲ್ಲಿ ಪಿಪಿಎಫ್‌, ಎನ್‌ಎಸ್‌ಸಿ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡದೆ ಕೇಂದ್ರ ಸರ್ಕಾರವು, ಯಥಾಸ್ಥಿತಿ ಕಾಯ್ದುಕೊಂಡಿದೆ.

2024–25ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿಗದಿ‍ಪಡಿಸಿರುವ ಬಡ್ಡಿದರವು ಅಕ್ಟೋಬರ್‌ 1ರಿಂದ ಡಿಸೆಂಬರ್‌ 31ರ ವರೆಗೆ ಮುಂದುವರಿಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸೋಮವಾರ ತಿಳಿಸಿದೆ.

ADVERTISEMENT

ಪ್ರಸ್ತುತ ಸುಕನ್ಯಾ ಸಮೃದ್ಧಿ ಶೇ 8.2, ಪಿಪಿಎಫ್‌ ಶೇ 7.1, ಅಂಚೆ ಕಚೇರಿಯ ಉಳಿತಾಯ ಠೇವಣಿ ಶೇ 4, ಕಿಸಾನ್‌ ವಿಕಾಸ್‌ ಪತ್ರ ಶೇ 7.5, ಎನ್‌ಎಸ್‌ಸಿ ಶೇ 7.7 ಹಾಗೂ ಮಾಸಿಕ ಉಳಿತಾಯ ಯೋಜನೆಗೆ ಶೇ 7.4 ಬಡ್ಡಿ‌ದರ ನಿಗದಿಪಡಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.