ನವದೆಹಲಿ: ಏಪ್ರಿಲ್ 1ರಿಂದ ಆರಂಭವಾಗುವ 2025–26ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರದಲ್ಲಿ ಕೇಂದ್ರ ಸರ್ಕಾರವು ಯಥಾಸ್ಥಿತಿ ಕಾಯ್ದುಕೊಂಡಿದೆ.
2024–25ನೇ ಆರ್ಥಿಕ ವರ್ಷದ ನಾಲ್ಕು ತ್ರೈಮಾಸಿಕಗಳಲ್ಲಿ ಬಡ್ಡಿದರ ಬದಲಾವಣೆ ಮಾಡಿರಲಿಲ್ಲ. ಮಾರ್ಚ್ ತ್ರೈಮಾಸಿಕದಲ್ಲಿದ್ದ ಬಡ್ಡಿದರವು ಜೂನ್ ತ್ರೈಮಾಸಿಕಕ್ಕೂ ಅನ್ವಯವಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಶುಕ್ರವಾರ ತಿಳಿಸಿದೆ.
ಪ್ರಸ್ತುತ ಸುಕನ್ಯಾ ಸಮೃದ್ಧಿ ಶೇ 8.2, ಪಿಪಿಎಫ್ ಶೇ 7.1, ಅಂಚೆ ಕಚೇರಿಯ ಉಳಿತಾಯ ಠೇವಣಿ ಶೇ 4, ಕಿಸಾನ್ ವಿಕಾಸ್ ಪತ್ರ ಶೇ 7.5, ಎನ್‌ಎಸ್‌ಸಿ ಶೇ 7.7 ಹಾಗೂ ಮಾಸಿಕ ಉಳಿತಾಯ ಯೋಜನೆಗೆ ಶೇ 7.4ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.