ADVERTISEMENT

ಇಂಧನ ಉಳಿತಾಯ ಜಾಗೃತಿ ಮೂಡಿಸುವ ಪ್ರಚಾರ ವಾಹನ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 20:00 IST
Last Updated 17 ಡಿಸೆಂಬರ್ 2018, 20:00 IST
ಸಂಚಾರಿ ವಾಹನಕ್ಕೆ ಪಿಸಿಆರ್‌ಎದ ಕಾರ್ಯನಿರ್ವಾಹಕ ನಿರ್ದೇಶಕ ಅಲೋಕ್ ತ್ರಿಪಾಠಿ ಅವರು ಚಾಲನೆ ನೀಡಿದರು. ‘ಐಒಸಿ’ಯ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಲ್. ಪ್ರಮೋದ್ ಉಪಸ್ಥಿತರಿದ್ದರು.
ಸಂಚಾರಿ ವಾಹನಕ್ಕೆ ಪಿಸಿಆರ್‌ಎದ ಕಾರ್ಯನಿರ್ವಾಹಕ ನಿರ್ದೇಶಕ ಅಲೋಕ್ ತ್ರಿಪಾಠಿ ಅವರು ಚಾಲನೆ ನೀಡಿದರು. ‘ಐಒಸಿ’ಯ ಕಾರ್ಯನಿರ್ವಾಹಕ ನಿರ್ದೇಶಕ ಡಿ.ಎಲ್. ಪ್ರಮೋದ್ ಉಪಸ್ಥಿತರಿದ್ದರು.   

ಬೆಂಗಳೂರು: ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿ ಬರುವ ಪೆಟ್ರೋಲ್‌ ಉಳಿತಾಯ ಸಂಶೋಧನಾ ಸಂಸ್ಥೆಯು (ಪಿಸಿಆರ್‌ಎ), ಇಂಧನ ಉಳಿತಾಯದ ಬಗ್ಗೆ ಜನಜಾಗೃತಿ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಂಡಿದೆ.

ತೈಲ ಮತ್ತು ಅನಿಲ ಸಂರಕ್ಷಣೆ, ಮನೆ ಬಳಕೆಯ ಎಲ್‌ಪಿಜಿ, ಕೃಷಿ, ಸಾರಿಗೆ ಮತ್ತು ಕೈಗಾರಿಕಾ ವಲಯದಲ್ಲಿ ಇಂಧನ ಉಳಿತಾಯದ ಬಗ್ಗೆ ಬಳಕೆದಾರರಿಗೆ ಸಲಹೆ ನೀಡುವುದು ಈ ಸಂಚಾರಿ ವಾಹನ ಪ್ರಚಾರ ಕಾರ್ಯಕ್ರಮದ ಉದ್ದೇಶವಾಗಿದೆ. ಈ ವಾಹನವು 75 ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT