ADVERTISEMENT

ಐಒಸಿಎಲ್‌: ಕಾರ್ಯನಿರ್ವಾಹಕ ನಿರ್ದೇಶಕರಾಗಿ ಶೈಲೇಂದ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 16:21 IST
Last Updated 19 ಫೆಬ್ರುವರಿ 2021, 16:21 IST
ಕೆ. ಶೈಲೇಂದ್ರ
ಕೆ. ಶೈಲೇಂದ್ರ   

ಬೆಂಗಳೂರು: ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಲಿಮಿಟೆಡ್‌ನ (ಐಒಸಿಎಲ್‌) ದಕ್ಷಿಣ ವಲಯದ ಪ್ರಾದೇಶಿಕ ಸೇವೆಗಳ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆ. ಶೈಲೇಂದ್ರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ತಮಿಳುನಾಡು ಮತ್ತು ಪುದುಚೇರಿ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಕೇರಳ ಹಾಗೂ ಲಕ್ಷದ್ವೀಪದ ಇಂಡಿಯನ್ ಆಯಿಲ್ ಕಂಪನಿಯದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಬರುತ್ತವೆ.

ಮಾನವ ಸಂಪನ್ಮೂಲ, ಹಣಕಾಸು, ಎಲ್‌ಪಿಜಿ ಮತ್ತು ಇಂಧನ ಸಾಗಣೆ, ಒಪ್ಪಂದಗಳು, ಗುಣಮಟ್ಟ ನಿಯಂತ್ರಣ ಸೇರಿದಂತೆ ಪ್ರಮುಖ ವಿಭಾಗಗಳ ಪ್ರಾದೇಶಿಕ ಉಸ್ತುವಾರಿ ಹೊಣೆಯನ್ನೂ ಶೈಲೇಂದ್ರ ಹೊತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.