ನವದೆಹಲಿ: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮದ (ಐಆರ್ಸಿಟಿಸಿ) ಷೇರುಗಳು ಸೋಮವಾರ ಭರ್ಜರಿ ವಹಿವಾಟು ಕಂಡವು.
ಪ್ರತಿ ಷೇರಿಗೆ ನೀಡಿಕೆ ಬೆಲೆ ₹ 320 ನಿಗದಿಪಡಿಸಲಾಗಿತ್ತು. ಆದರೆ ಅದಕ್ಕಿಂತಲೂ ಶೇ 127ರಷ್ಟು ಹೆಚ್ಚು ಅಂದರೆ ಪ್ರತಿ ಷೇರು ₹ 728.60ರಂತೆ ಮಾರಾಟವಾಯಿತು.ಇದರಿಂದ ಷೇರು ವಿಕ್ರಯಕ್ಕೆ ಉತ್ತೇಜನ ದೊರೆತಿದೆ ಎಂದುತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
ವಹಿವಾಟಿಗೆ ಪ್ರವೇಶಿಸಿದ ಮೊದಲ ದಿನವೇ ಷೇರುಗಳ ಬೆಲೆಯಲ್ಲಿ ಗರಿಷ್ಠ ಏರಿಕೆ ಕಂಡ ಎರಡನೇ ಕಂಪನಿ ಎನ್ನುವ ಹೆಗ್ಗಳಿಕೆಯನ್ನೂ ಐಆರ್ಸಿಟಿಸಿ ತನ್ನದಾಗಿಸಿಕೊಂಡಿದೆ. ಐಆರ್ಸಿಟಿಸಿನ ಮಾರುಕಟ್ಟೆ ಮೌಲ್ಯ ಈಗ ₹ 11,657.60 ಕೋಟಿಗಳಿಗೆ ತಲುಪಿದೆ. 2017ರ ಜುಲೈನಲ್ಲಿ ಸಾಲ್ಸರ್ ಎಂಜಿನಿಯರಿಂಗ್ ಷೇರುಗಳು ಶೇ 142ರಷ್ಟು ಜಿಗಿತ ಕಂಡಿದ್ದವು.
**
ಇದೊಂದು ಐತಿಹಾಸಿಕ ಕ್ಷಣ. ನೋಂದಣಿ ಆಗದ ದಿನವೇ ಈ ರೀತಿಯ ಯಶಸ್ಸು ಸಾಧಿಸಿದ ಮೊದಲ ಕೇಂದ್ರೋದ್ಯಮವಾಗಿದೆ
- ಎಂ.ಪಿ. ಮಲ್ಲ,ಐಆರ್ಸಿಟಿಸಿ ಅಧ್ಯಕ್ಷ
**
ಗುಣಮಟ್ಟದ ಸೇವೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ
- ಪಿ.ಎಸ್.ಮಿಶ್ರಾ,ರೈಲ್ವೆ ಮಂಡಳಿ ಸದಸ್ಯ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.