ADVERTISEMENT

ಜೀವ ವಿಮೆ ಪಾಲಿಸಿ ನವೀಕರಣ ವಿಸ್ತರಣೆ

ಪಿಟಿಐ
Published 10 ಮೇ 2020, 18:32 IST
Last Updated 10 ಮೇ 2020, 18:32 IST

ನವದೆಹಲಿ: ಮಾರ್ಚ್‌ ತಿಂಗಳಲ್ಲಿ ಪಾವತಿಸಬೇಕಾಗಿದ್ದ ಜೀವ ವಿಮೆ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ಮೇ 31ರವರೆಗೆ ವಿಸ್ತರಿಸಲಾಗಿದೆ.

ದಿಗ್ಬಂಧನ ವಿಸ್ತರಣೆಯಾಗಿದ್ದರಿಂದ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಈ ನಿರ್ಧಾರ ಕೈಗೊಂಡಿದೆ. ಇದರಿಂದ ಪಾಲಿಸಿದಾರರಿಗೆ ನೆಮ್ಮದಿ ಸಿಗಲಿದೆ. ವಿಮೆ ಪರಿಹಾರ ಸೌಲಭ್ಯ ಜಾರಿಯಲ್ಲಿ ಇರಲು ಈ ಗಡುವಿನ ಒಳಗೆ ಪಾಲಿಸಿದಾರರು ಪಾವತಿಸಬೇಕಾಗಿದ್ದ ಎಲ್ಲ ಕಂತುಗಳನ್ನು ಪಾವತಿಸಬೇಕಾಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT