ADVERTISEMENT

ಕಬ್ಬಿಣ ಅದಿರು ಉತ್ಪಾದನೆ ಹೆಚ್ಚಳ: ಕೇಂದ್ರ ಗಣಿ ಸಚಿವಾಲಯ

ಪಿಟಿಐ
Published 5 ಮೇ 2025, 13:37 IST
Last Updated 5 ಮೇ 2025, 13:37 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2024–25ರ ಆರ್ಥಿಕ ವರ್ಷದಲ್ಲಿ  28.9 ಕೋಟಿ ಟನ್‌ನಷ್ಟು ಕಬ್ಬಿಣದ ಅದಿರು ದೇಶದಲ್ಲಿ ಉತ್ಪಾದನೆ ಆಗಿದೆ ಎಂದು ಕೇಂದ್ರ ಗಣಿ ಸಚಿವಾಲಯ ಸೋಮವಾರ ತಿಳಿಸಿದೆ.

2023–24ರ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ 27.7 ಕೋಟಿ ಟನ್‌ನಷ್ಟು ಉತ್ಪಾದನೆಯಾಗಿತ್ತು. ಈ ಉತ್ಪಾದನೆಗೆ ಹೋಲಿಸಿದರೆ ಶೇ 4.3ರಷ್ಟು ಏರಿಕೆಯಾಗಿದೆ. ಹೆಚ್ಚಿದ ಬೇಡಿಕೆಯಿಂದ ಉತ್ಪಾದನೆಯಲ್ಲಿ ಏರಿಕೆಯಾಗಿದೆ ಎಂದು ತಿಳಿಸಿದೆ. 

ಮ್ಯಾಂಗನೀಸ್‌ ಅದಿರು ಉತ್ಪಾದನೆ 38 ಲಕ್ಷ ಟನ್‌ ಆಗಿದೆ. ಅಲ್ಯೂಮಿನಿಯಂ 42 ಲಕ್ಷ ಟನ್‌, ತಾಮ್ರ ಉತ್ಪಾದನೆ 5.73 ಲಕ್ಷ ಟನ್‌ ಆಗಿದೆ ಎಂದು ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.