ADVERTISEMENT

₹ 62 ಸಾವಿರ ಕೋಟಿ ಆದಾಯ ತೆರಿಗೆ ಮರುಪಾವತಿ

ಪಿಟಿಐ
Published 3 ಜುಲೈ 2020, 12:38 IST
Last Updated 3 ಜುಲೈ 2020, 12:38 IST
-
-   

ನವದೆಹಲಿ: ಈ ವರ್ಷದ ಏಪ್ರಿಲ್‌ 8ರಿಂದ ಜೂನ್‌ 30ವರೆಗಿನ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು 20 ಲಕ್ಷ ತೆರಿಗೆದಾರರಿಗೆ ₹ 62,361 ಕೋಟಿ ಮೊತ್ತವನ್ನು ಮರು ಪಾವತಿ ಮಾಡಿದೆ.

ಈ ಅವಧಿಯಲ್ಲಿನ 56 ಕೆಲಸದ ದಿನಗಳಲ್ಲಿ ಪ್ರತಿ ನಿಮಿಷಕ್ಕೆ 76 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತೆರಿಗೆದಾರರ ಬ್ಯಾಂಕ್‌ ಖಾತೆಗೆ ನೇರವಾಗಿ ಮರುಪಾವತಿ ಮಾಡಲಾಗಿದೆ.

ಇಲಾಖೆಯಿಂದ ಬಂದಿರುವ ಇ–ಮೇಲ್‌ಗಳಿಗೆ ತಕ್ಷಣ ಸ್ಪಂದಿಸಿದರೆ ಅಂಥವರ ಪ್ರಕರಣಗಳಲ್ಲೂ ವಿಳಂಬ ಮಾಡದೆ ಮರುಪಾವತಿ ಮಾಡಲಾಗುವುದು ಎಂದು ನೇರ ತೆರಿಗೆ ಕೇಂದ್ರೀಯ ಮಂಡಳಿ (ಸಿಬಿಡಿಟಿ) ತಿಳಿಸಿದೆ.

ADVERTISEMENT

19.07 ಲಕ್ಷ: ವೈಯಕ್ತಿಕ ಆದಾಯ ತೆರಿಗೆದಾರರು

* ₹ 23,453 ಕೋಟಿ ಮರುಪಾವತಿ

* 1.36 ಲಕ್ಷ ಕಾರ್ಪೊರೇಟ್ ತೆರಿಗೆದಾರರು

* ₹ 38,908 ಕೋಟಿ ಮರುಪಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.