ನವದೆಹಲಿ: ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್ನ ನಿವ್ವಳ ಲಾಭ ಶೇ 12.69ರಷ್ಟು ಹೆಚ್ಚಾಗಿ ₹ 3,436 ಕೋಟಿಗೆ ತಲುಪಿದೆ.
ಎಫ್ಎಂಸಿಜಿ ಮತ್ತು ಕೃಷಿಗೆ ಸಂಬಂಧಿಸಿದ ವಹಿವಾಟಿನಲ್ಲಿ ಏರಿಕೆ ಆಗಿರುವುದರಿಂದ ನಿವ್ವಳ ಲಾಭದಲ್ಲಿ ಏರಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.
ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ನಿವ್ವಳ ಲಾಭ₹ 3,049 ಕೋಟಿ ಇತ್ತು.
ನಿವ್ವಳ ಮಾರಾಟ ₹ 11,746 ಕೋಟಿಯಿಂದ ₹ 12,532 ಕೋಟಿಗೆ ಶೇ 6.69ರಷ್ಟು ಏರಿಕೆಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.