ADVERTISEMENT

ಅಮೆಜಾನ್‌ನ 1.2 ಕೋಟಿ ಷೇರು ಮಾರಾಟ

ಏಜೆನ್ಸೀಸ್
Published 11 ಫೆಬ್ರುವರಿ 2024, 13:34 IST
Last Updated 11 ಫೆಬ್ರುವರಿ 2024, 13:34 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸಿಯಾಟಲ್: ಅಮೆಜಾನ್‌ನ ₹16 ಸಾವಿರ ಕೋಟಿಗಿಂತ ಹೆಚ್ಚಿನ ಮೌಲ್ಯದ 1.2 ಕೋಟಿ ಷೇರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ಅಧ್ಯಕ್ಷ ಜೆಫ್ ಬೆಜೋಸ್ ತಿಳಿಸಿದ್ದಾರೆ.

ಫೆಬ್ರುವರಿ 7 ಮತ್ತು 8ರಂದು 1,19,97,698 ಸಾಮಾನ್ಯ ಷೇರುಗಳ ಮಾರಾಟದ ಕುರಿತು ಅಮೆರಿಕದ ಸೆಕ್ಯುರಿಟೀಸ್‌ ಮತ್ತು ಎಕ್ಸ್‌ಚೇಂಜ್ ಕಮಿಷನ್‌ಗೆ ಬೆಜೋಸ್ ತಿಳಿಸಿದ್ದಾರೆ.

ಫೆಬ್ರುವರಿ 7ರ ಮತ್ತೊಂದು ಪ್ರತ್ಯೇಕ ಫೈಲಿಂಗ್‌ನಲ್ಲಿ, ಅಂದಾಜು ₹69 ಸಾವಿರ ಕೋಟಿ ಮೌಲ್ಯದ 5 ಕೋಟಿ ಷೇರುಗಳ ಮಾರಾಟಕ್ಕೆ ಬೆಜೋಸ್‌ ಪ್ರಸ್ತಾವನೆ ಸಲ್ಲಿಸಿದ್ದಾರೆ.

ADVERTISEMENT

ಅಮೆಜಾನ್‌ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಿಂದ ಬೆಜೋಸ್‌ ಅವರು ವೈಯಕ್ತಿಕ ಕಾರಣದಿಂದ 2021ರಲ್ಲಿ ಕೆಳಗಿಳಿದಿದ್ದರು. ಸುಮಾರು ಮೂರು ದಶಕಗಳ ಹಿಂದೆ ಸಿಯಾಟಲ್‌ನಲ್ಲಿ ಅಮೆಜಾನ್‌ ಕಂಪನಿಯನ್ನು ಸ್ಥಾಪಿಸಲಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.