ADVERTISEMENT

ಜೆಟ್‌: ಎನ್‌ಸಿಎಲ್‌ಟಿ ವಿಚಾರಣೆ ಇಂದು

ಪಿಟಿಐ
Published 18 ಜೂನ್ 2019, 19:10 IST
Last Updated 18 ಜೂನ್ 2019, 19:10 IST
   

ಮುಂಬೈ: ನಷ್ಟದಲ್ಲಿರುವ ಜೆಟ್‌ ಏರ್‌ವೇಸ್‌ ವಿಮಾನಯಾನ ಸಂಸ್ಥೆಯನ್ನು ದಿವಾಳಿ ಪ್ರಕ್ರಿಯೆಗೆ ಒಳಪಡಿಸುವ ಕುರಿತುರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಬುಧವಾರ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

ಸಂಸ್ಥೆಯಿಂದ ₹ 8 ಸಾವಿರ ಕೋಟಿ ಸಾಲದ ಬಾಕಿ ವಸೂಲಿ ಮಾಡಲು ಸಂಸ್ಥೆಯನ್ನು ಮಾರಾಟ ಮಾಡುವ ಬದಲಿಗೆ ಎನ್‌ಸಿಎಲ್‌ಟಿ ಮೂಲಕ ದಿವಾಳಿ ಪ್ರಕ್ರಿಯೆಗೆ ಒಳಪಡಿಸಲು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ನೇತೃತ್ವದಲ್ಲಿನ 26 ಬ್ಯಾಂಕ್‌ಗಳ ಒಕ್ಕೂಟವು ತೀರ್ಮಾನಿಸಿದೆ.

ಕಳೆದ ಐದು ತಿಂಗಳಿನಿಂದ ಸಂಸ್ಥೆಯನ್ನು ಮಾರಾಟ ಮಾಡಲು ಬ್ಯಾಂಕ್‌ಗಳ ಒಕ್ಕೂಟ ಪ್ರಯತ್ನ ನಡೆಸಿತ್ತಾದರೂ ಹಲವು ಕಾರಣಗಳಿಂದ ಸಾಧ್ಯವಾಗಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.