ಮುಂಬೈ: ಅಕ್ಷಯ ತೃತೀಯ ಸಮೀಪಿಸುತ್ತಿರುವುದರಿಂದ ಗ್ರಾಹಕರನ್ನು ಆಕರ್ಷಿಸಲು ಚಿನ್ನಾಭರಣ ವರ್ತಕರು ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಲಾಕ್‌ಡೌನ್ ಜಾರಿಯಲ್ಲಿ ಇರುವುದರಿಂದ ಮಳಿಗೆಗಳಲ್ಲಿ ಖರೀದಿ ಸಾಧ್ಯವಿಲ್ಲ. ಹೀಗಾಗಿ ಕಲ್ಯಾಣ್, ತನಿಷ್ಕದಂತಹ ಪ್ರಮುಖ ಕಂಪನಿಗಳು ಆನ್‌ಲೈನ್ ಮೂಲಕ ಮಾರಾಟವನ್ನು ಆರಂಭಿಸಿವೆ.
‘ಅಕ್ಷಯ ತೃತೀಯಕ್ಕೆ ಪ್ರತಿ ಬಾರಿಯೂ ಚಿನ್ನಾಭರಣ ಖರೀದಿಸುತ್ತಿದ್ದವರಿಗೆ ನೆರವಾಗಲು ಆನ್‌ಲೈನ್ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಚಿನ್ನ ಮಾಲೀಕತ್ವದ ಪ್ರಮಾಣಪತ್ರ ನೀಡಲಾಗುವುದು. ಇದು ಚಿನ್ನ ಖರೀದಿಯ ದೃಢೀಕರಣವಾಗಿದ್ದು, ಅಕ್ಷಯ ತೃತೀಯದಂದು ವಾಟ್ಸ್‌ಆ್ಯಪ್ ಅಥವಾ ಇ–ಮೇಲ್ ಮೂಲಕ ಗ್ರಾಹಕರಿಗೆ ತಲುಪಿಸಲಾಗುವುದು’ ಎಂದು ಕಲ್ಯಾಣ್ ಜುವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್. ಕಲ್ಯಾಣರಾಮನ್ ಅವರು ತಿಳಿಸಿದ್ದಾರೆ.
‘ಲಾಕ್‌ಡೌನ್ ಇರುವುದರಿಂದ ಏಪ್ರಿಲ್‌ನಲ್ಲಿ ವಾರ್ಷಿಕ ವಹಿವಾಟಿ ನಲ್ಲಿ ಶೇ 15 ರಷ್ಟು ವರಮಾನ ನಷ್ಟವಾಗಲಿದೆ’ ಎಂದು ಅಖಿಲ ಭಾರತ ಹರಳು ಮತ್ತು ಚಿನ್ನಾಭರಣ ಸಮಿತಿಯ ಅಧ್ಯಕ್ಷ ಅನಂತ ಪದ್ಮನಾಭ ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.