ADVERTISEMENT

Jio BlackRock: ಐದು ಮ್ಯೂಚುವಲ್‌ ಫಂಡ್‌ ಆರಂಭಿಸಲು ಸೆಬಿ ಒಪ್ಪಿಗೆ

ಪಿಟಿಐ
Published 16 ಜುಲೈ 2025, 14:03 IST
Last Updated 16 ಜುಲೈ 2025, 14:03 IST
ಜಿಯೊಬ್ಲ್ಯಾಕ್‌ರಾಕ್‌
ಜಿಯೊಬ್ಲ್ಯಾಕ್‌ರಾಕ್‌   

ನವದೆಹಲಿ: ಜಿಯೊ ಫೈನಾನ್ಶಿಯಲ್ ಸರ್ವಿಸಸ್‌ ಮತ್ತು ಅಮೆರಿಕದ ಬ್ಲ್ಯಾಕ್‌ರಾಕ್‌ನ ಜಂಟಿ ಪಾಲುದಾರಿಕೆಯ ಜಿಯೊಬ್ಲ್ಯಾಕ್‌ರಾಕ್‌ ಅಸೆಟ್ ಮ್ಯಾನೇಜ್‌ಮೆಂಟ್ ಕಂಪನಿಯು ಐದು ಮ್ಯೂಚುವಲ್‌ ಫಂಡ್‌ಗಳನ್ನು (ಎಂ.ಎಫ್‌) ಆರಂಭಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಅನುಮತಿ ನೀಡಿದೆ.

ಜಿಯೊಬ್ಲ್ಯಾಕ್‌ರಾಕ್‌ ನಿಫ್ಟಿ 50 ಇಂಡೆಕ್ಸ್ ಫಂಡ್‌, ಜಿಯೊಬ್ಲ್ಯಾಕ್‌ರಾಕ್‌ ನಿಫ್ಟಿ (8 ವರ್ಷದಿಂದ 13 ವರ್ಷ) ಜಿ–ಸೆಕ್ಯುರಿಟೀಸ್‌ ಇಂಡೆಕ್ಸ್ ಫಂಡ್‌, ಜಿಯೊಬ್ಲ್ಯಾಕ್‌ರಾಕ್‌ ನಿಫ್ಟಿ ಸ್ಮಾಲ್‌ಕ್ಯಾಪ್‌ 250 ಇಂಡೆಕ್ಸ್ ಫಂಡ್‌, ಜಿಯೊಬ್ಲ್ಯಾಕ್‌ರಾಕ್‌ ನಿಫ್ಟಿ ನೆಕ್ಸ್ಟ್‌50 ಇಂಡೆಕ್ಸ್ ಫಂಡ್‌ ಮತ್ತು ಜಿಯೊಬ್ಲ್ಯಾಕ್‌ರಾಕ್‌ ನಿಫ್ಟಿ ಮಿಡ್‌ಕ್ಯಾಪ್‌ 150 ಇಂಡೆಕ್ಸ್ ಫಂಡ್‌ಗೆ ಅನುಮತಿ ಸಿಕ್ಕಿದೆ.

ಈ ಪೈಕಿ ನಾಲ್ಕು ಫಂಡ್‌ಗಳು ಈಕ್ವಿಟಿ ಆಧಾರಿತ, ಒಂದು ಫಂಡ್‌ ಸಾಲಪತ್ರ ಆಧಾರಿತವಾಗಿದೆ.

ADVERTISEMENT

ಜಿಯೊಬ್ಲ್ಯಾಕ್‌ರಾಕ್‌ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯು ತನ್ನ ಹೊಸ ಮೂರು ಮ್ಯೂಚುವಲ್‌ ಫಂಡ್‌ಗಳ ಮೂಲಕ ₹17,800 ಕೋಟಿ ಹೂಡಿಕೆ ಸಂಗ್ರಹಿಸಿರುವುದಾಗಿ ಇತ್ತೀಚೆಗೆ ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.