ADVERTISEMENT

ಟೆಡ್ ಹವಾಮಾನ ಬದಲಾವಣೆ ಕೌಂಟ್‌ಡೌನ್‌ಗೆ ಜಿಯೋ ಸಹಯೋಗ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 11:18 IST
Last Updated 10 ಅಕ್ಟೋಬರ್ 2020, 11:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಜಾಗತಿಕ ಹವಾಮಾನ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿ ರಿಲಯನ್ಸ್‌ ಸಮೂಹದ ಜಿಯೋ ಸಹಯೋಗದಲ್ಲಿಟೆಡ್ ಕ್ಲೈಮೇಟ್ ಕೌಂಟ್‌ಡೌನ್ ಕಾರ್ಯಕ್ರಮ ಶನಿವಾರ ಬಿತ್ತರವಾಗಲಿದೆ.

ಹಸಿರುಮನೆ ಪರಿಣಾಮದಿಂದಾಗಿ ಭೂಮಿ ಬಿಸಿಯಾಗುತ್ತಿದ್ದು ಸಾಗರಗಳು ಆಮ್ಲೀಕರಣಗೊಳ್ಳುತ್ತಿರುವುದರಿಂದ ಹವಾಮಾನದಲ್ಲಿ ಏರುಪೇರಾಗುತ್ತಿದೆ. ಈಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲುಟೆಡ್ ಕ್ಲೈಮೇಟ್ ಕೌಂಟ್‌ಡೌನ್ ವೇದಿಕೆಯಲ್ಲಿ ಚರ್ಚೆಗಳು, ಚಿಂತನೆಗಳು ನಡೆಯಲಿವೆ.

ಜಗತ್ತಿನ ಎಲ್ಲರಿಗೂ ಸುರಕ್ಷಿತ, ಸ್ವಚ್ಛ ಹಾಗೂ ಶೂನ್ಯ ಇಂಗಾಲದ ವಾತಾವರಣ ಸೃಷ್ಟಿಸುವುದು ಇದರ ಗುರಿಯಾಗಿದೆ. ಟೆಡ್ ಸಹಯೋಗದ ಈ ಕಾರ್ಯಕ್ರಮದಲ್ಲಿ ಜಿಯೋ ವಿಜ್ಞಾನಿಗಳು, ಉದ್ಯಮಿಗಳು, ನಗರ ಯೋಜಕರು, ರೈತರು, ಸಿಇಒಗಳು, ಹೂಡಿಕೆದಾರರು, ಕಲಾವಿದರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ ನಾನಾ ವಲಯಗಳ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸುವರು.

ADVERTISEMENT

ಶನಿವಾರ (ಅ.10) ರಾತ್ರಿ ಸಮಯ 8:30ರಿಂದ ಈ ಕಾರ್ಯಕ್ರಮದ ತಡೆರಹಿತವಾಗಿ (ಲೈವ್ ಸ್ಟ್ರೀಮಿಂಗ್) ಪ್ರಸಾರವಾಗಲಿದೆ. ಜಿಯೋ ಫೈಬರ್ ಬಳಕೆದಾರರು ಜಿಯೋ ಸೆಟ್ ಟಾಪ್ ಬಾಕ್ಸ್‌ನಲ್ಲಿ ಜಿಯೋ ಪೇಜಸ್ ಮೂಲಕ ವೀಕ್ಷಣೆ ಮಾಡಬಹುದು.

ವೆಬ್‌ಸೈಟ್: https://countdown.ted.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.