ADVERTISEMENT

ಕುಂಭಮೇಳದಲ್ಲಿ ಮೊಬೈಲ್‌ ನೆಟ್‌ವರ್ಕ್ ಬಳಕೆಯ ಸಿಂಹಪಾಲು ನಮ್ಮದೇ: ಜಿಯೊ

ದಾಖಲೆಯ ಸಂಖ್ಯೆಯ ಜನ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸೇವೆಯನ್ನು ಗ್ರಾಹಕರಿಗೆ ಸಾಟಿಯಿಲ್ಲದ ಅನುಭವದಲ್ಲಿ ನೀಡಿದ್ದೇವೆ ಎಂದು ತಿಳಿಸಿದೆ.

ಪಿಟಿಐ
Published 28 ಫೆಬ್ರುವರಿ 2025, 13:01 IST
Last Updated 28 ಫೆಬ್ರುವರಿ 2025, 13:01 IST
<div class="paragraphs"><p>ಕುಂಭಮೇಳ, ಜಿಯೊ</p></div>

ಕುಂಭಮೇಳ, ಜಿಯೊ

   

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನವರಿ 13ರಿಂದ ಆಯೋಜನೆಗೊಂಡಿದ್ದ ಮಹಾಕುಂಭ ಮೇಳ ಫೆಬ್ರುವರಿ 26 ರಂದು ಅಂತ್ಯವಾಯಿತು. ಅಲ್ಲಿನ ಸರ್ಕಾರ ನೀಡಿರುವ ಅಂಕಿ–ಅಂಶಗಳ ಪ್ರಕಾರ ಈ ಸಾರಿಯ ಮಹಾಕುಂಭ ಮೇಳದಲ್ಲಿ 60 ಕೋಟಿಗೂ ಅಧಿಕ ಜನ ಪುಣ್ಯ ಸ್ನಾನ ಮಾಡಿದರು ಎನ್ನಲಾಗಿದೆ.

ಇನ್ನೊಂದೆಡೆ ಅಷ್ಟೊಂದು ಅಭೂತಪೂರ್ವ ಜನಸಂದಣಿಯ ಪ್ರದೇಶದಲ್ಲೂ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸೇವೆಯನ್ನು ಯಾವುದೇ ಅಡೆತಡೆ ಇಲ್ಲದೇ ಒದಗಿಸಿದ್ದೇವೆ ಎಂದು ಭಾರತದ ಟೆಲಿಕಾಂ ದೈತ್ಯ ಜಿಯೊ ತಿಳಿಸಿದೆ.

ADVERTISEMENT

ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಒಂದು ದಿನ ಗರಿಷ್ಠ 2 ಕೋಟಿ ವಾಯ್ಸ್‌ ಕರೆಗಳು ಹೋಗಿವೆ. 40 ಕೋಟಿಗೂ ಅಧಿಕ ಡೆಟಾ ಸರ್ವಿಸ್ ವಿನಂತಿಗಳು (ಇಂಟರ್‌ನೆಟ್ ಬಳಕೆಯ ಕೋರಿಕೆಗಳು) ಆ ದಿನ ಬಂದಿವೆ ಎಂದು ಜಿಯೊ ತಿಳಿಸಿದೆ. ಆದರೆ ಅದು ಯಾವ ದಿನ ಎಂಬುದನ್ನು ತಿಳಿಸಿಲ್ಲ.

ದಾಖಲೆಯ ಸಂಖ್ಯೆಯ ಜನ ಭಾಗವಹಿಸಿದ ಕಾರ್ಯಕ್ರಮದಲ್ಲಿ ಮೊಬೈಲ್ ನೆಟ್‌ವರ್ಕ್ ಹಾಗೂ ಇಂಟರ್‌ನೆಟ್ ಸೇವೆಯನ್ನು ಗ್ರಾಹಕರಿಗೆ ಸಾಟಿಯಿಲ್ಲದ ಅನುಭವದಲ್ಲಿ ನೀಡಿದ್ದೇವೆ ಎಂದು ತಿಳಿಸಿದೆ.

ಎರಿಕ್ಸನ್ ಸಹಭಾಗಿತ್ವದಲ್ಲಿ ಕುಂಭಮೇಳದಲ್ಲಿ ನೆಟ್‌ವರ್ಕ್ ಸಮಸ್ಯೆಯಾಗದಂತೆ 700 MHzನ ನೆಟ್‌ವರ್ಕ್ ಟವರ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ಜಂಟಿ ಹೇಳಿಕೆ ತಿಳಿಸಿದೆ.

ಒಟ್ಟಾರೆ ಕುಂಭಮೇಳದಲ್ಲಿ ನೆಟ್‌ವರ್ಕ್ ಬಳಕೆಯ ಪ್ರಮಾಣ ಶೇ. 55 ರಷ್ಟು ಸಿಂಹಪಾಲನ್ನು ಜಿಯೊ ಹೊಂದಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.