ADVERTISEMENT

₹2,599ಕ್ಕೆ ಜಿಯೊಫೋನ್‌ ಪ್ರೈಮಾ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 16:16 IST
Last Updated 8 ನವೆಂಬರ್ 2023, 16:16 IST
ಜಿಯೊಪ್ರೈಮಾ
ಜಿಯೊಪ್ರೈಮಾ   

ಬೆಂಗಳೂರು: ರಿಲಯನ್ಸ್‌ ಜಿಯೊ ಕಂಪನಿಯು ‘ಜಿಯೊಫೋನ್‌ ಪ್ರೈಮಾ’ ಎನ್ನುವ 4ಜಿ ಫೋನ್‌ ಬಿಡುಗಡೆ ಮಾಡಿದೆ. ₹2,599ಕ್ಕೆ ಈ ಫೋನ್‌ ಲಭ್ಯವಿದೆ.

ಈ ಫೋನ್ KaiOS ನಿಂದ ಕಾರ್ಯಾಚರಿಸುತ್ತದೆ. ಯುಟ್ಯೂಬ್, ಫೇಸ್‌ಬುಕ್, ವಾಟ್ಸ್‌ಆ್ಯಪ್‌, ಗೂಗಲ್ ವಾಯ್ಸ್ ಅಸಿಸ್ಟೆಂಟ್‌ನಂತಹ ವೈಶಿಷ್ಟ್ಯಗಳ ಈ ಫೋನ್‌ನಲ್ಲಿ ಇವೆ.  2.4 ಇಂಚಿನ ಪರದೆ, 1800 ಎಂಎಎಚ್‌ ಬ್ಯಾಟರಿಯನ್ನು ಇದು ಒಳಗೊಂಡಿದೆ ಎಂದು ಕಂಪನಿ ಹೇಳಿದೆ.

ಜಿಯೊ ಟಿವಿ, ಜಿಯೊ ಸಿನಿಮಾ ತರಹದ ಪ್ರೀಮಿಯಂ ಡಿಜಿಟಲ್ ಸೇವೆಗಳೊಂದಿಗೆ ಈ ಫೋನ್‌ ಸಿದ್ಧವಾಗಿದೆ. ಜಿಯೊಪೇ ಮೂಲಕ ಯುಪಿಐ ಪಾವತಿ ಮಾಡಬಹುದು. ಅಮೆಜಾನ್‌, ಜಿಯೊಮಾರ್ಟ್‌ ಮತ್ತು ರಿಲಯನ್ಸ್‌ ಡಿಜಿಟಲ್‌ನಲ್ಲಿ ಈ ಫೋನ್‌ ಖರೀದಿಸಬಹುದು ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.